(Translated by https://www.hiragana.jp/)
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಸ್ಮಿಯಂ - ವಿಕಿಸೋರ್ಸ್ ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಸ್ಮಿಯಂ

ವಿಕಿಸೋರ್ಸ್ದಿಂದ
   ಮೂಲದೊಡನೆ ಪರಿಶೀಲಿಸಿ

ಆಸ್ಮಿಯಂ ರಾಸಾಯನಿಕ ಲೋಹಧಾತು : ಸಂಕೇತ Os; ಆವರ್ತ ಕೋಷ್ವಕದಲ್ಲಿ ಇದರ ಸಂಖ್ಯೆ 76; ಪರಮಾಣುತೂಕ 190.2; ಸಹಜಲಭ್ಯ ಸ್ಥಿರ ಸಮಸ್ಥಾನಿಗಳು (ಐಸೊಟೋಪ್ಸ್) 184, 186, 187, 188, 189, 190, 192, ಇವುಗಳಲ್ಲಿ 192 ಸಮಸ್ಥಾನಿ ಪ್ರಕೃತಿಯಲ್ಲಿ ದೊರೆಯುವ ಲೋಹದಲ್ಲಿ 41% ಇರುತ್ತದೆ; ಉಳಿದವು ವಿವಿಧ ಪ್ರಮಾಣಗಳಲ್ಲಿ ಲಭಿಸುತ್ತವೆ. ಇತರ ಸಮಸ್ಥಾನಿಗಳು 182, 183, 185, 191, 193, 194. ಇವು ರಶ್ಮಿ ವಿಕಿರಣತೆ (ರೇಡಿಯೋ ಆಕ್ಟಿವಿಟಿ) ಉಳ್ಳವು ಆದ್ದರಿಂದ ಅಸ್ಥಿರವಾಗಿವೆ. ಆಸ್ಮಿಯಮ್ಮಿನ ದ್ರವೀಕರಿಸುವ ಉಷ್ಣತೆ 20000 ಸೆ.ಗಿಂತ ಹೆಚ್ಚು; ಕುದಿಯುವ ಉಷ್ಣತೆ 5000 ಸೆ. ಎಲೆಕ್ಟ್ರಾನಿಕ್ ವಿನ್ಯಾಸ.

1s2 2s2 2p6 3s2 3p6 3d10 4s2 4p6 4d10 4f14 5s2 5p6 5d6 6s2

ಆಸ್ಮಿಯಂ ಒಂದು ಗಡುಸಾದ (ರಿಫ್ರಾಕ್ಟರಿ) ಲೊಹವಾದರೂ ಸಾಮಾನ್ಯ ಉಷ್ಣತೆಯಲ್ಲಿಯೂ ಆಕ್ಸಿಜನ್ನಿನೊಂದಿಗೆ ಬೆರೆತು ನೀಲಿಬಣ್ಣದ ಆಕ್ಸೈಡನ್ನು ಉತ್ಪಾದಿಸುತ್ತದೆ. ಈ ಸಂಯುಕ್ತ ಲೋಹದಮೇಲೆ ತೆಳು ಪದರದಂತಿರುತ್ತದೆ. ಗಾಳಿಯಲ್ಲಿ ಕಾಸಿದಾಗ ಆಸ್ಮಿಯಂ ಆಕ್ಸೈಡ್ ಸುಲಭವಾಗಿ ಆಸ್ಮಿಯಂ ಟೆಟ್ರಾಕ್ಸೈಡ್ (ಔsಔ4) ಎಂಬ ವಸ್ತುವಿಗೆ ಪರಿವರ್ತನೆಯಾಗುತ್ತದೆ. 1300 ಸೆ. ಔsಔ4 ನಲ್ಲಿ ಕುದಿಯುತ್ತದೆ ಮತ್ತು ನಿರ್ವರ್ಣವಾದ ಮತ್ತು ಕ್ಲೋರಿನ್‍ನಂತೆ ವಾಸನೆಯುಳ್ಳ ಅತ್ಯಂತ ವಿಷಯುಕ್ತ ಅನಿಲವಾಗಿ ಪರಿವರ್ತಿತವಾಗುತ್ತದೆ. ಮೂಗಿನ ಲೋಳೆ ಪೊರೆ (ಮ್ಯೂಕಸ್ ಮೆಂಬ್ರೇನ್) ಮತ್ತು ಕಣ್ಣುಗಳಿಗೆ ಇದು ಅಪಾಯಕಾರಿ. ಆಸ್ಮಿಯಂ ನೈಟ್ರಿಕ್ ಆಮ್ಲದಲ್ಲಿ ಸುಲಭವಾಗಿ ವಿಲೀನವಾಗುತ್ತದೆ. ಈ ಲೋಹದ ವೇಲೆನ್ಸಿ 2+. 3+. 4+. 6+.ಮತ್ತು 8+ ಆಗಿರುವುದರಿಂದ ಅನೇಕ ಬಗೆಯ ಕ್ಲಿಷ್ಟ ರಚನೆಯುಳ್ಳ ಸಂಯುಕ್ತಗಳನ್ನು ರಚಿಸುತ್ತದೆ.

ಆಸ್ಮಿಯಂ ಪ್ಲಾಟಿನಂ ಲೋಹದ ಅದುರಿನೊಂದಿಗೂ ಇರಿಡಿಯಂ ಲೋಹದೊಂದಿಗೆ ಆಸ್ಮರಿಡಿಯಂ ಎಂಬ ಮಿಶ್ರಲೋಹದ ರೂಪದಲ್ಲಿಯೂ ದೊರೆಯುತ್ತದೆ. ಲೋಹವನ್ನು ತಯಾರಿಸುವ ವಿಧಾನದಲ್ಲಿ ಮೊದಲನೆಯ ಹೆಜ್ಜೆಯಾಗಿ ನೈಟ್ರಿಕ್ ಆಮ್ಲದಲ್ಲಿ ಲೋಹವನ್ನು ವಿಲೀನಗೊಳಿಸಿ ತರುವಾಯ ಆಸ್ಮಿಯಂ ಟೆಟ್ರಾಕ್ಸೈಡನ್ನು ಅನಿಲರೂಪದಲ್ಲಿ ಹೊರತೆಗೆಯುವರು. ಇನ್ನೊಂದು ವಿಧಾನದಲ್ಲಿ ಅದುರನ್ನು ಗಾಳಿಯಲ್ಲಿ ಹುರಿದು (ರೋಸ್ಟ್) ಆಸ್ಮಿಯಂ ಟೆಟ್ರಾಕ್ಸೈಡನ್ನು ಪಡೆಯುತ್ತಾರೆ. ಮುಂದೆ ಈ ಅನಿಲವನ್ನು ಮದ್ಯಸಾರದಲ್ಲಿ ಕರಗಿದ ಪ್ರತ್ಯಾಮ್ಲದಲ್ಲಿ ಅವಶೋಷಿಸಲಾಗುವುದು (ಅಬ್‍ಸಾರ್ಬ್). ಇದರಿಂದ ಉತ್ಪತ್ತಿಯಾಗುವ ಆಸ್ಮೇಟ್ ದ್ರಾವಣದಿಂದ ಆಸ್ಮಿಯಂ ಸಲ್ಫೈಡ್ ಅಥವಾ ಆಸ್ಮಿಯಂ ಹೈಡ್ರಾಕ್ಸೈಡ್ ರೂಪದಲ್ಲಿ ಲೋಹವನ್ನು ಒತ್ತರಿಸುತ್ತಾರೆ. ಈ ಒತ್ತರಗಳನ್ನು ಹೈಡ್ರೊಜನ್ನಿನಿಂದ ಅಪಕರ್ಷಿಸಿ ಲೋಹವನ್ನು ಪಡೆಯುವರು.

ಮುಖ್ಯವಾದ ಸಂಯುಕ್ತಗಳು : 1. ಆಸ್ಮಿಯಂ ಟೆಟ್ರಾಕ್ಲೋರೈಡ್(ಔsಅಟ4) : ಕಪ್ಪುಬಣ್ಣದ ಘನಪದಾರ್ಥ. ಉತ್ಕರ್ಷಣ ಶಕ್ತಿಯಿಲ್ಲದ (ಉದಾ: ಹೈಡ್ರೋಕ್ಲೋರಿಕ್ ಆಮ್ಲ) ಆಮ್ಲಗಳಲ್ಲಿ ಕರಗುವುದಿಲ್ಲ. ಆಸ್ಮಿಯಂ ಲೋಹವನ್ನು 7000 ಸೆ. ಉಷ್ಣತೆಯಲ್ಲಿ ಕ್ಲೋರಿನ್ನಿನೊಂದಿಗೆ ಕಾಸಿ ಪಡೆಯುತ್ತಾರೆ.

2. ಆಸ್ಮಿಯಂ ಟೆಟ್ರಾಕ್ಸೈಡ್ (OsO4) ಅತಿ ತೆಳು ಹಳದಿಬಣ್ಣದ ಹರಳಿನಂಥ ವಸ್ತು. 400 ಸೆ. ಉಷ್ಣತೆಯಲ್ಲಿ ದ್ರವಿಸುತ್ತದೆ. 1300 ಸೆ. ಉಷ್ಣತೆಯಲ್ಲಿ ಆವಿಯಾಗುತ್ತದೆ. ವಿಷಪದಾರ್ಥ, ನೀರಿನಲ್ಲಿ ಮತ್ತು ಕಾರ್ಬನ್ ಟೆಟ್ರಾಕ್ಲೋರೈಡ್‍ನಲ್ಲಿ ವಿಲೀನವಾಗುತ್ತದೆ. ಪ್ರಬಲ ಉತ್ಕರ್ಷಣ ವಸ್ತು. ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಮರಳಿಸಿ (ರೀಫ್ಲಕ್ಸ್) ಮುಂದೆ ಅಮೋನಿಯಂ ಕ್ಲೋರೈಡಿನೊಂದಿಗೆ ಸೇರಿಸಿದಾಗ ಅಮೋನಿಯಂ ಹೆಕ್ಸಾಕ್ಲೋರೋಆಸ್ಮೇಟ್ ಒತ್ತರಿಸುತ್ತದೆ. ಈ ಕಪ್ಪು ವಸ್ತುವನ್ನು [(ಓಊ4)2 ಔs ಅಟ6] ಹೈಡ್ರೊಜನ್ನಿನಲ್ಲಿ ಕಾಸಿದರೆ ಆಸ್ಮಿಯಂ ಲೋಹ ಬಿಡುಗಡೆಯಾಗುತ್ತದೆ.

ಉಪಯೋಗಗಳು : ಕೆಲವು ಆಗ್ರ್ಯಾನಿಕ್ ರಾಸಾಯನಿಕ ವಸ್ತುಗಳ ತಯಾರಿಕೆಯಲ್ಲಿ, ದ್ವಿಬಂಧಗಳಿಗೆ (ಡಬಲ್ ಬಾಂಡ್ಸ್) ಜಲಾಂಶಗಳನ್ನು ಸೇರಿಸುವ ಕ್ರಿಯೆಯಲ್ಲಿ ಆಸ್ಮಿಯಂ ಟೆಟ್ರಾಕ್ಸೈಡಿನ ಉಪಯೋಗವಿದೆ. ಜೋತಕ ದ್ರವ್ಯಗಳಲ್ಲೊಂದಾದ ಕಾರ್ಟಿಸೋನ್ ವಸ್ತುವಿನ ತಯಾರಿಕೆಯನ್ನು ಇಲ್ಲಿ ಉದಾಹರಿಸಬಹುದು. ಸಸ್ಯಗಳ ಮತ್ತು ಜೀವಿಗಳ ಅಂಗಾಂಶಗಳನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಲು ಸುಲಭವಾಗುವಂತೆ ಅಂಗಾಂಶಗಳನ್ನು ಗಟ್ಟಿಮಾಡಲು ಮತ್ತು ಅವುಗಳಿಗೆ ಬಣ್ಣಕೊಡಲು ಆಸ್ಮಿಯಂ ಟೆಟ್ರಾಕ್ಸೈಡನ್ನು ಉಪಯೋಗಿಸುತ್ತಾರೆ. ಹೈಡ್ರೊಜನ್ನನ್ನು ಸೇರಿಸುವ ಕ್ರಿಯೆಗೆ ಲೋಹ ಸೊಗಸಾದ ವೇಗವರ್ಧಕ. ಆಸ್ಮಿಯಂ ಮಿಶ್ರಲೋಹಗಳನ್ನು ಸೂಕ್ಷ್ಮವಾದ ಮತ್ತು ಕರಾರುವಾಕ್ಕಾದ ಯಂತ್ರಗಳಲ್ಲಿ ಬೇರಿಂಗುಗಳನ್ನಾಗಿ ಉಪಯೋಗಿಸುತ್ತಾರೆ. ಶಾಯೆಯಲ್ಲಿರುವ ಆಮ್ಲ ಈ ಲೋಹವನ್ನೊಳಗೊಂಡ ಆಸ್ಮಿರಿಡಿಯಂ ಮಿಶ್ರಲೋಹವನ್ನು ಕರಗಿಸಲಾರದಾದ್ದರಿಂದ ಲೇಖನಿಗಳ ತುದಿಗಳನ್ನು ಈ ಲೋಹಮಿಶ್ರಣದಿಂದ ಮಾಡುತ್ತಾರೆ. ಮಿಶ್ರಲೋಹ ಅತಿಗಡುಸಾದ್ದರಿಂದ ಲೇಖನಿಗಳ ತುದಿ ಬೇಗ ಸವೆಯುವುದೂ ಇಲ್ಲ.

(ಎಚ್.ಎಸ್.ಎಸ್.)