ಚಿತ್ರದುರ್ಗ: ಐತಿಹಾಸಿಕ ಮತ್ತು ಧಾರ್ಮಿಕವಾಗಿ ಮಹತ್ವ ಪಡೆದಿರುವ ಕೋಟೆನಾಡು ಚಿತ್ರದುರ್ಗದಲ್ಲಿ ರೈಲ್ವೆಗೆ ಸಂಬಂಧಿಸಿದ ನಾನಾ ಕಾರ್ಯಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಅವುಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಭರವಸೆ ನೀಡಿದರು.ನಗರದ ಶ್ರೀ ನೀಲಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ನೀಲಕಂಠೇಶ್ವರ ಸ್ವಾಮಿ ದರ್ಶನ ಪಡೆದು, ವೀರಶೈವ ಸಮಾಜದ ಪದಾಧಿಕಾರಿಗಳಿಂದ ಗೌರವ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. '' ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ನೇರ ರೈಲು ಯೋಜನೆಯನ್ನು 2027ರ ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಲಾಗುವುದು. ಈಗಾಗಲೇ ದಾವಣಗೆರೆಯಲ್ಲಿರೈಲ್ವೆ ಮಾರ್ಗಕ್ಕೆ ಅಗತ್ಯವಾಗಿ ಬೇಕಾದ ಭೂಮಿ ವಶಪಡಿಸಿಕೊಳ್ಳಲಾಗಿದೆ. ತುಮಕೂರಿನಿಂದ ಚಿತ್ರದುರ್ಗದವರೆಗೂ ಸಮೀಕ್ಷೆ ಮಾಡಿದ್ದೇವೆ. ಶಿರಾದಿಂದ ಸ್ವಲ್ಪ ಭಾಗ ಭೂಮಿ ವಶಪಡಿಸಿಕೊಳ್ಳಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ವಿಭಾಗ ಆಯುಕ್ತರಿಗೆ ಸೂಚನೆ ನೀಡಲಾಗಿದೆ,'' ಎಂದರು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಪಿ.ವಿರೇಂದ್ರಕುಮಾರ್, ಖಂಜಾಚಿ ಕೆ.ಎಂ.ತಿಪ್ಪೇಸ್ವಾಮಿ, ನಿರ್ದೇಶಕರಾದ ಕೆ.ಎನ್.ವಿಶ್ವನಾಥಯ್ಯ, ಜಿ.ಎಂ.ಪ್ರಕಾಶ್, ಎಸ್.ವಿ.ಸಿದ್ದೇಶ್, ಲತಾ ಉಮೇಶ್, ನಿರಂಜನ ದೇವರಮನೆ, ಎಸ್.ವಿ.ಕೋಟ್ರೇಶ್, ಸಿದ್ದಪ್ಪ ಪಿ.ಎಂ.ಪಿಳ್ಳೇಕೇರನಹಳ್ಳಿ, ಗಾಣಿಗ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ವಿರುಪಾಕ್ಷಪ್ಪ, ಅಕ್ಕಮಹಾದೇವಿ ಮಹಿಳಾ ಸಮಾಜದ ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯಕುಮಾರ್, ನಿರ್ದೆಶಕ ಪೃಥ್ವೀಶ್ ಸೇರಿದಂತೆ ಸಮಾಜದ ಇತರರು ಉಪಸ್ಥಿತರಿದ್ದರು.
ರೈಲ್ವೆ ಗೇಟ್ ಬಳಿ ಸೇತುವೆ
'' ರಾಮದುರ್ಗ ಮತ್ತು ತುಮಕೂರು 290 ಕಿ.ಮೀ, ಹಾಗೂ ದಾವಣಗೆರೆ, ಚಿತ್ರದುರ್ಗ, ತುಮಕೂರು ನೇರ ರೈಲ್ವೆ ಮಾರ್ಗ 175 ಕಿ.ಮೀ. ಈ ಎರಡು ರೈಲ್ವೆ ಯೋಜನೆಗಳನ್ನು 2026ರ ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸುವ ಗುರಿಯಿದೆ. ಆದಾಗ್ಯೂ 2027ರವರೆಗೆ ಸಮಯ ಪಡೆದಿದ್ದೇನೆ. ನನ್ನ ಇಲಾಖೆಗೆ ಸಂಬಂಧಪಟ್ಟಂತೆ ಚಿತ್ರದುರ್ಗದಲ್ಲಿ ಲೆವೆಲ್ ಕ್ರಾಸಿಂಗ್ ಸೇರಿ ಇನ್ನಿತರೆ ಕೆಲಸ ಮಾಡುವಂತೆ ಕೋರಿದ್ದಾರೆ. ಅವುಗಳನ್ನು ಶೀಘ್ರವೇ ಪೂರ್ಣ ಮಾಡಲಾಗುವುದು ಇದರ ಬಗ್ಗೆ ಡಿವಿಜಲ್ ಕಮಿಷನರ್ ಸೇರಿ ಎಲ್ಲಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಚಿತ್ರದುರ್ಗ ರೈಲು ನಿಲ್ದಾಣದ ಬಳಿಯ ಪಿಬಿ ರಸ್ತೆಯಲ್ಲಿರುವ ರೈಲ್ವೆ ಗೇಟ್‌ಗೆ ಮೇಲುಸೇತುವೆ ನಿರ್ಮಾಣ ಮಾಡಿ, ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು' ಎಂದು ಹೇಳಿದರು.ಈ ಸಂದರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಪಿ.ವಿರೇಂದ್ರಕುಮಾರ್, ಖಂಜಾಚಿ ಕೆ.ಎಂ.ತಿಪ್ಪೇಸ್ವಾಮಿ, ನಿರ್ದೇಶಕರಾದ ಕೆ.ಎನ್.ವಿಶ್ವನಾಥಯ್ಯ, ಜಿ.ಎಂ.ಪ್ರಕಾಶ್, ಎಸ್.ವಿ.ಸಿದ್ದೇಶ್, ಲತಾ ಉಮೇಶ್, ನಿರಂಜನ ದೇವರಮನೆ, ಎಸ್.ವಿ.ಕೋಟ್ರೇಶ್, ಸಿದ್ದಪ್ಪ ಪಿ.ಎಂ.ಪಿಳ್ಳೇಕೇರನಹಳ್ಳಿ, ಗಾಣಿಗ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ವಿರುಪಾಕ್ಷಪ್ಪ, ಅಕ್ಕಮಹಾದೇವಿ ಮಹಿಳಾ ಸಮಾಜದ ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯಕುಮಾರ್, ನಿರ್ದೆಶಕ ಪೃಥ್ವೀಶ್ ಸೇರಿದಂತೆ ಸಮಾಜದ ಇತರರು ಉಪಸ್ಥಿತರಿದ್ದರು.