ದಿ ಟೈಮ್ಸ್ ಆಫ್ ಇಂಡಿಯಾ
ವರ್ಗ | ದಿನಪತ್ರಿಕೆ |
---|---|
ವಿನ್ಯಾಸ | ಕಾಗದ |
ಮಾಲೀಕ | ಬೆನೆಟ್ ಮತ್ತು ಕೋಲ್ಮನ್ ಕಂ. |
ಮುಖ್ಯ ಸಂಪಾದಕ | ಜೈದೀಪ್ ಭೋಸ್ |
ಸಹಾಯಕ ಸಂಪಾದಕ | ಜಗ್ ಸುರೈಯ್ಯಾ |
ಸ್ಥಾಪನೆ | ೧೮೩೮ |
Political alignment | Classical liberal[೧] |
ಭಾಷೆ | ಆಂಗ್ಲ |
ಕೇಂದ್ರ ಕಾರ್ಯಾಲಯ | Times House 7 Bahadur Shah Zafar Marg, ನವ ದೆಹಲಿ, Delhi 110002 India |
ಚಲಾವಣೆ | ೩,೧೪೬,೦೦೦ ಪ್ರತಿಗಳು |
OCLC number | 23379369 |
ಅಧಿಕೃತ ತಾಣ | Timesofindia.com |
ದಿ ಟೈಮ್ಸ್ ಆಫ್ ಇಂಡಿಯಾ (TOI ) ಭಾರತದಲ್ಲಿನ ಇಂಗ್ಲಿಷ್-ಭಾಷೆಯ ಒಂದು ಜನಪ್ರಿಯ ದೊಡ್ಡ ಕಾಗದದ ಹಾಳೆಯ ದೈನಿಕ ವೃತ್ತಪತ್ರಿಕೆ ಯಾಗಿದೆ.ವಿಶ್ವದಲ್ಲಿನ ಎಲ್ಲಾ ಇಂಗ್ಲಿಷ್-ಭಾಷಾ ದೈನಿಕ ವೃತ್ತಪತ್ರಿಕೆಗಳ ಪೈಕಿ, ಎಲ್ಲಾ ಸ್ವರೂಪಗಳನ್ನೂ ಹಾದುಹೋಗುವಂತೆ (ದೊಡ್ಡ ಕಾಗದದ ಹಾಳೆ, ಸಂಕ್ಷಿಪ್ತ, ಬರ್ಲಿನ್ನಿನ ಮತ್ತು ಆನ್‌ಲೈನ್) ಇದು ಅತ್ಯಧಿಕ ಪ್ರಸರಣವನ್ನು ಹೊಂದಿದೆ.[೨][೩] ಸಾಹು ಜೈನ್ ಕುಟುಂಬದ ಒಡೆತನದಲ್ಲಿರುವ ಬೆನೆಟ್, ಕೋಲ್‌ಮನ್ & ಕಂ. ಲಿಮಿಟೆಡ್ ಸಂಸ್ಥೆಯು ಇದರ ಮಾಲೀಕತ್ವವನ್ನು ಹೊಂದಿದೆ ಮತ್ತು ಆ ಸಂಸ್ಥೆಯಿಂದ ಇದು ನಿರ್ವಹಿಸಲ್ಪಡುತ್ತಿದೆ. 2008ರಲ್ಲಿ, ಈ ವೃತ್ತಪತ್ರಿಕೆಯು ಹೇಳಿಕೊಂಡ ಪ್ರಕಾರ, (3.14 ದಶಲಕ್ಷಕ್ಕೂ ಮೀರಿದ ಪತ್ರಿಕಾ ಪ್ರಸರಣದೊಂದಿಗೆ) ವಿಶ್ವದ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುವ ಇಂಗ್ಲಿಷ್-ಭಾಷಾ ದೈನಿಕ ವೃತ್ತಪತ್ರಿಕೆಯೆಂದು ಈ ವೃತ್ತಪತ್ರಿಕೆಯು ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್‌ನಿಂದ ಪ್ರಮಾಣೀಕರಿಸಲ್ಪಟ್ಟಿದ್ದು, ತನ್ಮೂಲಕ ವಿಶ್ವದಲ್ಲಿನ ಯಾವುದೇ ಭಾಷೆಯಲ್ಲಿನ 8ನೇ ಅತಿ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುವ ವೃತ್ತಪತ್ರಿಕೆಯ ಸ್ಥಾನವನ್ನು ಈ ಪತ್ರಿಕೆಗೆ ದೊರಕಿಸಿಕೊಟ್ಟಿದೆ.[೪] 2008ರ ಭಾರತೀಯ ವಾಚಕವೃಂದದ ಸಮೀಕ್ಷೆಯ (ಇಂಡಿಯನ್ ರೀಡರ್‌ಷಿಪ್ ಸರ್ವೆ) (IRS) ಪ್ರಕಾರ, ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಭಾರತದಲ್ಲಿ ಅತ್ಯಂತ ವ್ಯಾಪಕವಾಗಿ ಓದಲ್ಪಡುವ ಇಂಗ್ಲಿಷ್ ವೃತ್ತಪತ್ರಿಕೆಯಾಗಿದ್ದು, 13.3 ದಶಲಕ್ಷದಷ್ಟು ವಾಚಕವೃಂದವನ್ನು ಅದು ಹೊಂದಿದೆ. ಈ ಮೂಲಕ ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ವಾಚಕವೃಂದದ ಸಂಖ್ಯೆಯ ಅನುಸಾರ ಭಾರತದಲ್ಲಿನ ಅಗ್ರಗಣ್ಯ ಇಂಗ್ಲಿಷ್ ವೃತ್ತಪತ್ರಿಕೆಯ ಶ್ರೇಯಾಂಕ ಸಿಕ್ಕಿದಂತಾಗಿದೆ.[೫] ಕಾಮ್‌ಸ್ಕೋರ್‌ನ ಪ್ರಕಾರ, TOI ಆನ್‌ಲೈನ್ ವಿಶ್ವದ ಅತ್ಯಂತ ಹೆಚ್ಚು-ಜನರಿಂದ ವೀಕ್ಷಿಸಲ್ಪಡುವ ವೃತ್ತಪತ್ರಿಕೆ ವೆಬ್‌ಸೈಟ್ ಆಗಿದ್ದು, 2009ರ ಮೇ ತಿಂಗಳಲ್ಲಿ 159 ದಶಲಕ್ಷದಷ್ಟು ಪುಟವೀಕ್ಷಣೆಗಳು ನಡೆದಿವೆ. ಹೀಗಾಗಿ ದಿ ನ್ಯೂಯಾರ್ಕ್ ಟೈಮ್ಸ್ , ದಿ ಸನ್ , ವಾಷಿಂಗ್ಟನ್ ಪೋಸ್ಟ್ , ಡೇಲಿ ಮೇಲ್ ಮತ್ತು USA ಟುಡೆ ವೆಬ್‌ಸೈಟ್‌ಗಳು ಇವೇ ಮೊದಲಾದವುಗಳನ್ನು ಇದು ಮೀರಿಸಿದಂತಾಗಿದೆ.
ಇತಿಹಾಸ
[ಬದಲಾಯಿಸಿ]ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ೧೮೩೮ರ ನವೆಂಬರ್ ೩ರಂದು ದಿ ಮುಂಬಯಿ ಟೈಮ್ಸ್ ಅಂಡ್ ಜರ್ನಲ್ ಆಫ್ ಕಾಮರ್ಸ್ [೬] ಎಂಬ ಸ್ವರೂಪದಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ಸಂಸ್ಥಾಪಿಸಲ್ಪಟ್ಟಿತು. ೧೮೬೧ರಲ್ಲಿ ಇದು ಅಂಗೀಕರಿಸಲ್ಪಟ್ಟಿತು. ಪ್ರತಿ ಶನಿವಾರ ಮತ್ತು ಬುಧವಾರ ಪ್ರಕಟಗೊಳ್ಳುತ್ತಿದ್ದ ದಿ ಮುಂಬಯಿ ಟೈಮ್ಸ್ ಅಂಡ್ ಜರ್ನಲ್ ಆಫ್ ಕಾಮರ್ಸ್ ಪತ್ರಿಕೆಯನ್ನು ಒಂದು ಪಾಕ್ಷಿಕ ಆವೃತ್ತಿಯಾಗಿ ಬಿಡುಗಡೆ ಮಾಡಲಾಯಿತು. ಯುರೋಪ್, ಅಮೆರಿಕಾ ಖಂಡಗಳು, ಮತ್ತು ಉಪಖಂಡದಿಂದ ಪಡೆಯಲಾದ ಸುದ್ದಿಗಳನ್ನು ಇದು ಹೊಂದಿತ್ತು, ಮತ್ತು ನಿರಂತರವಾದ ಆವಿಹಡಗುಗಳ ಮೂಲಕ ಭಾರತ ಹಾಗೂ ಯುರೋಪ್ ನಡುವಣ ತಲುಪಿಸಲ್ಪಡುತ್ತಿತ್ತು. ಪತ್ರಿಕೆಯ ದೈನಿಕ ಆವೃತ್ತಿಗಳು ೧೮೫೦ರಿಂದ ಪ್ರಾರಂಭವಾದವು ಮತ್ತು ೧೮೬೧ರ ಹೊತ್ತಿಗೆ ಮುಂಬಯಿ ಟೈಮ್ಸ್ ಪತ್ರಿಕೆಯು ದಿ ಟೈಮ್ಸ್ ಆಫ್ ಇಂಡಿಯಾ ಎಂದು ಮರುನಾಮಕರಣಗೊಂಡಿತು. ೧೯ನೇ ಶತಮಾನದಲ್ಲಿ ಈ ವೃತ್ತಪತ್ರಿಕಾ ಕಂಪನಿಯು ೮೦೦ಕ್ಕೂ ಹೆಚ್ಚಿನ ಜನರನ್ನು ನೌಕರಿಗೆ ನೇಮಿಸಿಕೊಂಡಿತ್ತು ಹಾಗೂ ಭಾರತ ಮತ್ತು ಯುರೋಪ್‌ನಲ್ಲಿ ಒಂದು ಗಣನೀಯ ಪ್ರಮಾಣದ ಪ್ರಸರಣವನ್ನು ಹೊಂದಿತ್ತು. ಮೂಲತಃ ಬ್ರಿಟಿಷ್-ಮಾಲೀಕತ್ವದ ಮತ್ತು ನಿಯಂತ್ರಣದಡಿಯಲ್ಲಿದ್ದ ಈ ಪತ್ರಿಕೆಗೆ ಐವರ್ S. ಜೆಹು ಎಂಬಾತ ಕೊನೆಯ ಬ್ರಿಟಿಷ್ ಸಂಪಾದಕನಾಗಿದ್ದ. ೧೯೫೦ರಲ್ಲಿ ಈತ ತನ್ನ ಸಂಪಾದಕಗಿರಿಗೆ ರಾಜೀನಾಮೆಯನ್ನಿತ್ತ. ಭಾರತದ ಸ್ವಾತಂತ್ರ್ಯದ ನಂತರ, ಅಂದು ಪ್ರಖ್ಯಾತ ಕೈಗಾರಿಕಾ ಕುಟುಂಬವಾಗಿದ್ದ ದಾಲ್ಮಿಯಾ ಕುಟುಂಬಕ್ಕೆ ಪತ್ರಿಕೆಯ ಮಾಲೀಕತ್ವವು ಹಸ್ತಾಂತರವಾಯಿತು. ನಂತರ, UPಯ ಬಿಜ್ನೋರ್ ಮೂಲದ ಸಾಹು ಜೈನ್ ಸಮೂಹದ ಸಾಹು ಶಾಂತಿ ಪ್ರಸಾದ್ ಜೈನ್ ಇದನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು.ಬೆನೆಟ್, ಕೋಲ್‌ಮನ್ & ಕಂ. ಲಿಮಿಟೆಡ್ ಎಂಬ ಮಾಧ್ಯಮ ಸಮೂಹದಿಂದ ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಪ್ರಕಟಿಸಲ್ಪಡುತ್ತಿದೆ. ಈ ಕಂಪನಿಯು, ದಿ ಟೈಮ್ಸ್ ಗ್ರೂಪ್ ಎಂದು ಹೆಸರಾದ ತನ್ನ ಇತರ ಸಮೂಹ ಕಂಪನಿಗಳ ಜೊತೆಯಲ್ಲಿ ಸೇರಿಕೊಂಡು ದಿ ಇಕನಾಮಿಕ್ ಟೈಮ್ಸ್ , ಮುಂಬಯಿ ಮಿರರ್ , ನವಭಾರತ್ ಟೈಮ್ಸ್ (ಹಿಂದಿ-ಭಾಷೆಯ ಒಂದು ದೈನಿಕ ದೊಡ್ಡ ಕಾಗದದ ಹಾಳೆ), ಮಹಾರಾಷ್ಟ್ರ ಟೈಮ್ಸ್ (ಮರಾಠಿ-ಭಾಷೆಯ ಒಂದು ದೈನಿಕ ದೊಡ್ಡ ಕಾಗದದ ಹಾಳೆ) ಮೊದಲಾದವುಗಳನ್ನು ಕೂಡ ಪ್ರಕಟಿಸುತ್ತದೆ.ಟೈಮ್ಸ್ ಪತ್ರಿಕೆಯು ತಾನೊಂದು ಉದಾರವಾದಿ ವೃತ್ತಪತ್ರಿಕೆ[೧] ಎಂಬುದಾಗಿ ಸ್ವಯಂ-ಘೋಷಿಸಿಕೊಂಡಿದೆಯಾದರೂ, ಕೆಲವೊಮ್ಮೆ ಇದನ್ನು ಅಸಂಬದ್ಧ ಪತ್ರಿಕೆ ಎಂದು ವರ್ಣಿಸಲ್ಪಟ್ಟಿದೆ.[೭]ದಿ ಟೈಮ್ಸ್ ಗ್ರೂಪ್ ನ ಈಗಿನ ಆಡಳಿತ ಮಂಡಳಿಯು ಭಾರತೀಯ ಪತ್ರಿಕೋದ್ಯಮದ ಹೊರನೋಟ ಅಥವಾ ದೃಷ್ಟಿಕೋನವನ್ನು ಬದಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿಕೊಂಡು ಬಂದಿದೆ. ಭಾರತದಲ್ಲಿ, ವಿಶ್ವದಲ್ಲಿನ ಯಾವುದೇ ಭಾಗದಲ್ಲಿರುವಂತೆ, ವೃತ್ತಪತ್ರಿಕೆಯೊಂದರ ಸಂಪಾದಕನು ಒಂದು ವೃತ್ತಪತ್ರಿಕೆಯ ವ್ಯವಸ್ಥೆಯಲ್ಲಿನ ಒಂದು ಅತ್ಯಂತ ಗಮನಾರ್ಹ ಸ್ಥಾನವಾಗಿ ಸಾಂಪ್ರದಾಯಿಕವಾಗಿ ಪರಿಗಣಿಸಲ್ಪಟ್ಟಿದ್ದಾನೆ. ಆದಾಗ್ಯೂ, ವೃತ್ತಪತ್ರಿಕೆಯನ್ನು ಮಾರುಕಟ್ಟೆಯಲ್ಲಿನ ಕೇವಲ ಮತ್ತೊಂದು ಬ್ರಾಂಡ್‌ನಂತೆ ಪರಿಗಣಿಸುವ ಆಡಳಿತ ಮಂಡಳಿಯ ಕಾರ್ಯನೀತಿಗೆ ಅನುಗುಣವಾಗಿ ದಿ ಟೈಮ್ಸ್ ಆಫ್ ಇಂಡಿಯಾವು, ಈ ಅಭಿಪ್ರಾಯವನ್ನು ೧೯೯೦ರ ದಶಕದ ಆರಂಭದಲ್ಲಿಯೇ ಬದಲಾಯಿಸಿತು. ಪ್ರಮುಖ ವೃತ್ತಪತ್ರಿಕೆ ಹಾಗೂ ಅದರ ಅನೇಕ ಉಪ-ಆವೃತ್ತಿಗಳು ಈಗ ಸಂಪಾದಕರಿಂದ ನಡೆಸಲ್ಪಡುತ್ತಿದ್ದು, ಅವರು ಸಂಬಂಧಪಟ್ಟ ಕಾರ್ಯನಿರತರ ಶ್ರೇಣಿಯೊಳಗಿನಿಂದಲೇ ನೇಮಿಸಲ್ಪಟ್ಟಿರುತ್ತಾರೆ ಹಾಗೂ ಸಂಪಾದಕರ ಸ್ಥಾನವನ್ನು ಹೊಂದಲು ಕಂಪನಿಯು ಪ್ರತಿಯೊಬ್ಬರಿಗೂ ಸಮಾನಾವಕಾಶವನ್ನು ನೀಡುತ್ತದೆ. ಪ್ರತಿಯೊಂದು ವಿಭಾಗ ಹಾಗೂ ಕಾರ್ಯವಿಧಾನಕ್ಕೆ ಸಮಾನ ಗಮನ ಹಾಗೂ ಪ್ರಾಮುಖ್ಯತೆಯನ್ನು ಕೂಡ ದಿ ಟೈಮ್ಸ್ ಗ್ರೂಪ್ ನೀಡುತ್ತದೆ. ಇದರಿಂದಾಗಿ ಸಮೂಹವು ಒಂದು ವೃತ್ತಿಪರ ಅಸ್ತಿತ್ವವನ್ನು ಕಾಯ್ದುಕೊಂಡು ಬರಲು ಸಾಧ್ಯವಾಗಿದೆ ಹಾಗೂ ದೇಶದಲ್ಲಿನ ಅತ್ಯಂತ ಲಾಭದಾಯಕ ವೃತ್ತಪತ್ರಿಕೆಯಾಗಿ ತನ್ನ ಸ್ಥಾನವನ್ನು ಖಾತ್ರಿಪಡಿಸಿಕೊಳ್ಳಲು ಸಮೂಹಕ್ಕೆ ಸಾಧ್ಯವಾಗಿದೆ.೨೦೦೭ರ ಜನವರಿಯಲ್ಲಿ, ಪತ್ರಿಕೆಯ ಕನ್ನಡ ಆವೃತ್ತಿಯು ಬೆಂಗಳೂರಿನಲ್ಲಿ ಪ್ರಾರಂಭವಾಯಿತು ಹಾಗೂ ೨೦೦೮ರ ಏಪ್ರಿಲ್‌ನಲ್ಲಿ ಚೆನ್ನೈ ಆವೃತ್ತಿಯು ಪ್ರಾರಂಭವಾಯಿತು. ದಿ ಹಿಂದೂ ಹಾಗೂ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳು ಭಾರತದಲ್ಲಿನ ಅವರ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದು, ಪ್ರಸರಣದ ದೃಷ್ಟಿಯಲ್ಲಿ ಅವು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.[೮]
ಆವೃತ್ತಿಗಳು
[ಬದಲಾಯಿಸಿ]ಭಾರತದಲ್ಲಿನ ಈ ಕೆಳಕಂಡ ಸ್ಥಳಗಳಿಂದ ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಮುದ್ರಣಗೊಳ್ಳುತ್ತದೆ:
- ಅಹ್ಮದಾಬಾದ್
- ಭುವನೇಶ್ವರ
- ಬೆಂಗಳೂರು
- ಭೂಪಾಲ್
- ಚಂಡೀಗಢ
- ಚೆನ್ನೈ
- ದೆಹಲಿ
- ಗೋವಾ
- ಗುವಾಹಟಿ
- ಹೈದರಾಬಾದ್
- ಇಂದೋರ್
- ಜೈಪುರ
- ಕಾನ್‌ಪುರ್
- ಕೋಲ್ಕತ್ತಾ
- ಲಕ್ನೋ
- ಮಂಗಳೂರು
- ಮುಂಬಯಿ
- ಮೈಸೂರು
- ನಾಗಪುರ
- ಪಾಟ್ನಾ
- ಪುಣೆ
- ರಾಂಚಿ
- ಸೂರತ್
೨೦೦೮ರ ವರ್ಷಕ್ಕೆ ಸಂಬಂಧಿಸಿದಂತೆ ದಾಖಲಾದ ಒಟ್ಟು ಸರಾಸರಿ ಪ್ರಸರಣ: ೩,೪೩೩,೦೦೦ ಪ್ರತಿಗಳು ವಿಶ್ವದ ಹತ್ತು ಅಗ್ರಗಣ್ಯ ಇಂಗ್ಲಿಷ್ ದೈನಿಕಗಳು (ನಿವ್ವಳ ಮಾರಾಟದಗಳ ಅನುಸಾರವಾಗಿ)
- ದಿ ಟೈಮ್ಸ್ ಆಫ್ ಇಂಡಿಯಾ (ಭಾರತ): ೩,೪೩೩,೦೦೦
- ದಿ ಸನ್ (UK): ೩,೦೪೬,೦೦೦
- USA ಟುಡೆ (USA): ೨,೨೯೩,೦೦೦
- ಡೇಲಿ ಮೇಲ್ (UK): ೨,೧೯೪,೦೦೦
- ದಿ ವಾಲ್ ಸ್ಟ್ರೀಟ್ ಜರ್ನಲ್ (USA): ೨,೦೧೨,೦೦೦
- ದಿ ಡೇಲಿ ಮಿರರ್ (UK): ೧,೪೦೦,೦೦೦
- ದಿ ಹಿಂದೂ (ಭಾರತ): ೧,೩೩೧,೦೦೦
- ದಿ ಹಿಂದೂಸ್ತಾನ್ ಟೈಮ್ಸ್ (ಭಾರತ): ೧,೧೮೯,೦೦೦
- ದಿ ಡೆಕ್ಕನ್ ಕ್ರಾನಿಕಲ್ (ಭಾರತ): ೧,೦೦೩,೦೦೦
- ದಿ ನ್ಯೂಯಾರ್ಕ್ ಟೈಮ್ಸ್ (USA): ೧,೦೦೧,೦೦೦
(ಮೂಲ: ವರ್ಲ್ಡ್ ಪ್ರೆಸ್ ಟ್ರೆಂಡ್ಸ್ ೨೦೦೯-ವರ್ಲ್ಡ್ ಅಸೋಸಿಯೇಷನ್ ಆಫ್ ನ್ಯೂಸ್‌ಪೇಪರ್ಸ್‌ನಿಂದ ಪ್ರಕಟಿತ)
ದಿ ಟೈಮ್ಸ್ ಆಫ್ ಇಂಡಿಯಾ ದೊಂದಿಗೆ ಭಾಗೀದಾರರಾಗಿರುವ ಜನರು
[ಬದಲಾಯಿಸಿ]- ಇಂದು ಜೈನ್, ಪ್ರಸಕ್ತ ಅಧ್ಯಕ್ಷರು
- ಸಮೀರ್ ಜೈನ್, ಉಪಾಧ್ಯಕ್ಷ & ಪ್ರಕಾಶಕ
- ವಿನೀತ್ ಜೈನ್, ವ್ಯವಸ್ಥಾಪಕ ನಿರ್ದೇಶಕ
- ಜಗ್ ಸೂರಯ್ಯ (ಸಹ ಸಂಪಾದಕ, "ಜಗ್ಯುಲರ್ ವೇನ್"ನ ಅಂಕಣಕಾರ, "ಡಬ್ಯಾಮನ್ II"ನ ವ್ಯಂಗ್ಯಚಿತ್ರಕಾರ)
- ಸ್ವಾಮಿನಾಥನ್ ಅಯ್ಯರ್ (ಅಂಕಣಕಾರ, "ಸ್ವಾಮಿನಾಮಿಕ್ಸ್")
- R. K. ಲಕ್ಷ್ಮಣ್ ("ಯು ಸೆಡ್ ಇಟ್" ಸಂಪಾದಕೀಯ ವ್ಯಂಗ್ಯಚಿತ್ರ, ಪ್ರಖ್ಯಾತ ಶ್ರೀಸಾಮಾನ್ಯನನ್ನು ಇದು ಒಳಗೊಂಡಿರುತ್ತದೆ)
- ಬಚಿ ಕರ್ಕೇರಿಯಾ, ಅಂಕಣಕಾರ, "ಎರಾಟಿಕಾ"
- ಶೋಭಾ ಡೇ, ಅಂಕಣಗಾರ್ತಿ
- ಜೈದೀಪ್ ಬೋಸ್, ಕಾರ್ಯನಿರ್ವಾಹಕ ಸಂಪಾದಕ
- M J ಅಕ್ಬರ್, "ದಿ ಸೀಜ್ ವಿತಿನ್"ನ ಅಂಕಣಕಾರ, ಮತ್ತು ಸಂಪಾದಕೀಯ ತಂಡದ ಹಿಂದಿನ ಸದಸ್ಯ
- ಗುರುಚರಣ್ ದಾಸ್, ಅಂಕಣಕಾರ
- K. ಸುಬ್ರಹ್ಮಣ್ಯಂ, ಅಂಕಣಕಾರ ಮತ್ತು ಕಾರ್ಯನೀತಿಯ ವ್ಯವಹಾರಗಳ ವ್ಯಾಖ್ಯಾನಕಾರ
- ಗೌತಮ್ ಅಧಿಕಾರಿ, ಹಿಂದಿನ ಕಾರ್ಯನಿರ್ವಾಹಕ ಸಂಪಾದಕ, ಸಂಪಾದಕೀಯ ಸಲಹಾಕಾರ
- ರುಸ್ಸಿ ಕರಂಜಿಯಾ, 1930ರ ದಶಕದ ಅವಧಿಯಲ್ಲಿನ ಸಹಾಯಕ ಸಂಪಾದಕ
- ತ್ರಿವೇದಿ, ಅಂಕಣಕಾರ ಮತ್ತು ಹಾಸ್ಯಲೇಖಕ; ತನ್ನ ಸಂಪಾದಕೀಯಗಳು, ಹಾಸ್ಯದ ತುಣುಕುಗಳು, ಮತ್ತು ವಿಡಂಬನಶೀಲ ಪದ್ಯಗಳಿಗಾಗಿ ಪ್ರಖ್ಯಾತ.
ಪುರವಣಿಗಳು
[ಬದಲಾಯಿಸಿ]ದಿ ಟೈಮ್ಸ್ ಆಫ್ ಇಂಡಿಯಾ ಹಲವಾರು ನಗರ-ಕೇಂದ್ರಿತ ಪುರವಣಿಗಳನ್ನು ಹೊರತರುತ್ತದೆ. ಅವುಗಳೆಂದರೆ, ದೆಹಲಿ ಟೈಮ್ಸ್ , ಕಲ್ಕತ್ತಾ ಟೈಮ್ಸ್ , ಮುಂಬಯಿ ಟೈಮ್ಸ್ , ಹೈದರಾಬಾದ್ ಟೈಮ್ಸ್ , ಕಾನ್‌ಪುರ್ ಟೈಮ್ಸ್ , ಲಕ್ನೋ ಟೈಮ್ಸ್ , , ನಾಗಪುರ್ ಟೈಮ್ಸ್, ಬೆಂಗಳೂರ್ ಟೈಮ್ಸ್, ಪುಣೆ ಟೈಮ್ಸ್, ಅಹ್ಮದಾಬಾದ್ ಟೈಮ್ಸ್ ಮತ್ತು ಚೆನ್ನೈ ಟೈಮ್ಸ್, ದಿ ಟೈಮ್ಸ್ ಆಫ್ ಸೌತ್ ಮುಂಬಯಿ, ದಿ ಟೈಮ್ಸ್ ಆಫ್ ಡೂನ್, ಮೀರತ್ ಪ್ಲಸ್, ಹರಿದ್ವಾರ್ ಪ್ಲಸ್ , ಭೂಪಾಲ್ ಪ್ಲಸ್ . ನಿಯತವಾಗಿರುವ ಇತರ ಪುರವಣಿಗಳಲ್ಲಿ ಈ ಕೆಳಗಿನವು ಸೇರಿವೆ:
- ಟೈಮ್ಸ್ ವೆಲ್‌ನೆಸ್ (ಶನಿವಾರಗಳು) – ಆರೋಗ್ಯ ಸಂಬಂಧಿ ಸಮಸ್ಯೆಗಳಿಗಿರುವ ಪರಿಹಾರೋಪಾಯಗಳ ಕುರಿತು ಹಾಗೂ ಉತ್ತಮವಾದ ಜೀವನವನ್ನು ಸಾಗಿಸುವುದರೆಡಗಿನ ಮಾರ್ಗದರ್ಶನದ ಕುರಿತು ಟೈಮ್ಸ್ ವೆಲ್‌ನೆಸ್ ಗಮನ ಹರಿಸುತ್ತದೆ
- ಎಜುಕೇಷನ್ ಟೈಮ್ಸ್ (ಸೋಮವಾರಗಳು) –
ಎಂದಿಗೂ-ವಿಸ್ತರಣೆಯಾಗುತ್ತಲೇ ಇರುವ ವಿದ್ಯಾರ್ಥಿ ಸಮುದಾಯದ ಕಡೆಗೆ ಮತ್ತು ಕಲಿಕೆಯ ಅನುಭವದ ಕಡೆಗೆ, ಒಂದು ವೃತ್ತಿಜೀವನದ ಮಾರ್ಗದರ್ಶನವಾಗಿ, ಸಮಾಲೋಚಕನಾಗಿ ಹಾಗೂ ಸಲಹೆಗಾರನಾಗಿ ಎಜುಕೇಷನ್ ಟೈಮ್ಸ್ ಕಾರ್ಯನಿರ್ವಹಿಸುತ್ತದೆ.
- ಟೈಮ್ಸ್ ಅಸೆಂಟ್ (ಬುಧವಾರಗಳು) – ಟೈಮ್ಸ್ ಅಸೆಂಟ್‌ನ ಸಂಪಾದಕೀಯವು ಮಾನವ ಸಂಪನ್ಮೂಲ ಅಭಿವೃದ್ಧಿ, ಹಾಗೂ ವ್ಯವಹಾರ ಮತ್ತು ಸಮಾಜದ ಮೇಲಿನ ಪ್ರಭಾವ ಹಾಗೂ ಪರಿಣಾಮಗಳ ಕುರಿತು ಗಮನ ಹರಿಸುತ್ತದೆ.
- ZIG WHEELS – ZigWheels.com ಮೋಟಾರು ವಾಹನಗಳಿಗೆ ಸಂಬಂಧಿಸಿದ ಒಂದು ವೆಬ್‌ಸೈಟ್ ಆಗಿದ್ದು, ಭಾರತದ ವಾಹನಗಳ ಕುರಿತಾದ ಲೇಖನಗಳು ಹಾಗೂ ಸಂದರ್ಶನಗಳನ್ನು ಅವಲೋಕಿಸುತ್ತದೆ ಮತ್ತು ಚರ್ಚಿಸುತ್ತದೆ.
- ಟೈಮ್ಸ್ ಲೈಫ್ (ಭಾನುವಾರಗಳು) – ಟೈಮ್ಸ್ ಲೈಫ್ ವಿಶೇಷ ಲೇಖನಗಳಿಗೆ ಮೀಸಲಾದ ಒಂದು ಪುರವಣಿಯಾಗಿದೆ
- ವಾಟ್ಸ್ ಹಾಟ್ (ಶುಕ್ರವಾರಗಳು) – ಇತ್ತೀಚಿನ ಘಟನೆಗಳು/ವಿದ್ಯಮಾನಗಳ ಕುರಿತು ಇದು ಗಮನ ಹರಿಸುತ್ತದೆ. ವಾಹಿನಿಗಳು ಮತ್ತು ಕಾರ್ಯಕ್ರಮಗಳ ವಿವರಗಳಿಗಾಗಿ ಸೃಷ್ಟಿಯಾದ ವಿಶೇಷ ಪುಟಗಳನ್ನು ಇವು ಒಳಗೊಂಡಿರುತ್ತವೆ[೯]
- ರೂಷ್ (ಶನಿವಾರsಗಳು) – ಮಹಿಳೆಯರ ಆಸಕ್ತಿಯ ಕ್ಷೇತ್ರಗಳ ಕಡೆಗೆ ಇದು ಗಮನಹರಿಸುತ್ತದೆ.[೯]
ಚಿಕಣಿ-ಪತ್ರಿಕೆಗಳು:
- ಮುಂಬಯಿ ಮಿರರ್
- ಕೋಲ್ಕತಾ ಮಿರರ್
- ಬೆಂಗಳೂರ್ ಮಿರರ್
- ಅಹ್ಮದಾಬಾದ್ ಮಿರರ್
- ಪುಣೆ ಮಿರರ್
- ಇಂದೋರ್ ಮಿರರ್
ಟೀಕೆಗಳು
[ಬದಲಾಯಿಸಿ]ಓದುಗರ ಗಮನವನ್ನು ಸೆಳೆಯುವುದಕ್ಕಾಗಿ ಉತ್ಪ್ರೇಕ್ಷಿಸಲ್ಪಟ್ಟ ಶಿರೋನಾಮೆಗಳು ಮತ್ತು ವಯಸ್ಕರ ಸುದ್ದಿಗಳನ್ನು ನೀಡುವುದಕ್ಕೆ ಸಂಬಂಧಿಸಿ ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಟೀಕೆಗೊಳಗಾಗಿದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಟೈಮ್ಸ್ ನೌ
- ದಿ ಎಕನಾಮಿಕ್ ಟೈಮ್ಸ್
- ಪ್ರಸರಣದ ಆಧಾರದ ಮೇಲಿನ ಭಾರತದಲ್ಲಿನ ವೃತ್ತಪತ್ರಿಕೆಗಳ ಪಟ್ಟಿ
- ಪ್ರಸರಣದ ಆಧಾರದ ಮೇಲಿನ ವಿಶ್ವದಲ್ಲಿನ ವೃತ್ತಪತ್ರಿಕೆಗಳ ಪಟ್ಟಿ
- ET ನೌ
ಆಕರಗಳು
[ಬದಲಾಯಿಸಿ]- ↑ ೧.೦ ೧.೧ Times of India Leader Article declaring its position. www.timesofindia.com
- ↑ "TOI Online is world's No.1 newspaper website". Times of India. July 12, 2009. Retrieved 2007-10-16.
{{cite news}}
: Italic or bold markup not allowed in:|publisher=
(help) - ↑ "Dailies add 12.6 million readers: NRS". ದಿ ಹಿಂದೂ. August 29, 2006. Archived from the original on 2008-01-16. Retrieved 2007-10-16.
{{cite news}}
: Italic or bold markup not allowed in:|publisher=
(help) - ↑ "List of newspapers in the world by circulation". International Federation of Audit Bureaux of Circulations. June 30, 2008. Retrieved 2007-10-16.
{{cite news}}
: Italic or bold markup not allowed in:|publisher=
(help) - ↑ "Times now Masthead of the World". The Times of India. June 30, 2008. Archived from the original on 2009-04-23. Retrieved 2007-10-16.
- ↑ "The Times of India turns the Times of Colour". Televisionpoint.com. April 26, 2006. Archived from the original on 2007-10-12. Retrieved 2007-10-16.
{{cite web}}
: Italic or bold markup not allowed in:|publisher=
(help) - ↑ "Indian press consider surprise result". BBC News. May 14, 2004. Retrieved 25 July 2009.
{{cite web}}
: Italic or bold markup not allowed in:|work=
(help) - ↑ "The Times of India consolidating in Chennai". Televisionpoint.com. July 7, 2008. Archived from the original on 14 ಏಪ್ರಿಲ್ 2009. Retrieved 25 July 2009.
- ↑ ೯.೦ ೯.೧ "Services". Medianet. Archived from the original on 2009-12-25. Retrieved 2010-02-19.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ಜಾಲತಾಣ
- ದಿ ಟೈಮ್ಸ್ ಆಫ್ ಇಂಡಿಯಾ eಪತ್ರಿಕೆ Archived 2013-09-21 ವೇಬ್ಯಾಕ್ ಮೆಷಿನ್ ನಲ್ಲಿ. (E-ಪತ್ರಿಕೆ – ವೃತ್ತಪತ್ರಿಕೆಯ ಡಿಜಿಟಲ್ ಸ್ವರೂಪದ ನಕಲು)
- ಟೈಮ್ಸ್ ಸಿಂಡಿಕೇಷನ್ ಸರ್ವೀಸ್ ದಿ ಟೈಮ್ಸ್ ಗ್ರೂಪ್ನ ವಸ್ತು-ವಿಷಯದ ಪರವಾನಗಿ ನೀಡಿಕೆ ಮತ್ತು ಲೇಖನ ಪ್ರಕಟಣೆಯ ವಿಭಾಗ.
- CS1 errors: markup
- Commons link is locally defined
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- 1838ರಲ್ಲಿ ಸ್ಥಾಪಿಸಲ್ಪಟ್ಟ ಪ್ರಕಟಣೆಗಳು
- ದಿ ಟೈಮ್ಸ್ ಆಫ್ ಇಂಡಿಯಾ
- ದಿ ಟೈಮ್ಸ್ ಗ್ರೂಪ್ನ ಪ್ರಕಟಣೆಗಳು
- ಭಾರತದಲ್ಲಿ ಪ್ರಕಟಗೊಳ್ಳುವ ಇಂಗ್ಲಿಷ್-ಭಾಷಾ ವೃತ್ತಪತ್ರಿಕೆಗಳು
- ದೆಹಲಿಯಲ್ಲಿ ಪ್ರಕಟಗೊಳ್ಳುವ ವೃತ್ತಪತ್ರಿಕೆಗಳು
- ಕೋಲ್ಕತಾದಲ್ಲಿ ಪ್ರಕಟಗೊಳ್ಳುವ ವೃತ್ತಪತ್ರಿಕೆಗಳು
- ಮುಂಬಯಿಯಲ್ಲಿ ಪ್ರಕಟಗೊಳ್ಳುವ ವೃತ್ತಪತ್ರಿಕೆಗಳು
- ಚೆನ್ನೈನಲ್ಲಿ ಪ್ರಕಟಗೊಳ್ಳುವ ವೃತ್ತಪತ್ರಿಕೆಗಳು
- ಬೆಂಗಳೂರಿನಲ್ಲಿ ಪ್ರಕಟಗೊಳ್ಳುವ ವೃತ್ತಪತ್ರಿಕೆಗಳು
- ಭಾರತದಲ್ಲಿ ಪ್ರಕಟಗೊಳ್ಳುವ ವೃತ್ತಪತ್ರಿಕೆಗಳು
- ನವದೆಹಲಿ ಮೂಲದ ಕಂಪನಿಗಳು
- ಸಮೂಹ ಮಾಧ್ಯಮ
- ಭಾರತದ ಪ್ರಕಾಶಕ ಕಂಪನಿಗಳು