(Translated by https://www.hiragana.jp/)
ಅಲ್ ಮಸೂದ್ - ವಿಕಿಪೀಡಿಯ ವಿಷಯಕ್ಕೆ ಹೋಗು

ಅಲ್ ಮಸೂದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲ್-ಮಸೂದ್

ಅಲ್-ಮಸೂದ್ (೮೯೬-೯೫೬) ಒಬ್ಬ ಅರಬ್ ಇತಿಹಾಸಕಾರ , ಭೂಗೋಳಶಾಸ್ತ್ರಜ್ಞ, ಬಾಗದಾದಿನ ಮುಸ್ಲಿಂ ಚರಿತ್ರಕಾರ ಮತ್ತು ಪ್ರವಾಸಿ. ಆಗಿದ್ದರು. ಅವರುನ್ನು ಕೆಲವೊಮ್ಮೆ ಅರಬ್ ಹೆರೊಡೊಟಸ್ ಎಂದು ಕರೆಯಲಾಗುತ್ತದೆ. ಅಲ್-ಮಸೂದಿ ಅರೇಬಿಕ್ ಇತಿಹಾಸ ಮತ್ತು ವೈಜ್ಞಾನಿಕ ಭೌಗೋಳಿಕವನ್ನು ಒಗ್ಗೂಡಿಸುವಲ್ಲಿ ದೊಡ್ಡ ಪ್ರಮಾಣದ ಕೆಲಸ ಮಾಡಿದ್ದಾರೆ. ಹೊನ್ನಿನ ಹುಲ್ಲುಗಾವಲು, ಈ ಗ್ರಂಥದಲ್ಲಿ ಪ್ರಪಂಚದ ಇತಿಹಾಸವನ್ನು ತೋರಿಸಿದ್ದಾರೆ.

ಹೊನ್ನಿನ ಹುಲ್ಲುಗಾವಲು ಎಂಬ ಇವನ ಗ್ರಂಥ ಬಲು ಹೆಸರಾದುದು. ಇದು ಅರಬ್ಬರ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ ತಿಳಿಯಲು ಉಪಯುಕ್ತವಾಗಿದೆ. ಮಸೂದನನ್ನು ಅರಬ್ಬರ ಹೆರೋಡೊಟಸ್ ಎಂದು ಪರಿಗಣಿಸಿದ್ದಾರೆ. ಇವನು ಬಹುಶಃ ಇಸ್ಲಾಂ ಧರ್ಮ ಪ್ರಚಾರದಲ್ಲಿದ್ದ ಕಡೆಗಳಲ್ಲೆಲ್ಲ ಪ್ರವಾಸಮಾಡಿ ಭಾರತಕ್ಕೂ ಅನೇಕ ಸಲ ಬಂದಿರುವಂತೆ ಕಂಡುಬರುತ್ತದೆ (೯೦೦-೪೦). ಇವನು ಹುಟ್ಟಿದ ಕಾಲ ಗೊತ್ತಿಲ್ಲವಾದರೂ 956ರಲ್ಲಿ ನಿಧನನಾದನೆಂದು ತಿಳಿದುಬಂದಿದೆ.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: