(Translated by https://www.hiragana.jp/)
ಕವಿ - ವಿಕಿಪೀಡಿಯ ವಿಷಯಕ್ಕೆ ಹೋಗು

ಕವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಹಿತಿ, ಕವನ ಬರೆಯುವವರು. ಸಾಹಿತಿ ಬರೆದದ್ದು ಸಾಹಿತ್ಯವಾದರೆ, ಕವಿ ಬರೆದದ್ದು ಕವಿತೆ, ಕವನ, ಕಾವ್ಯವಾಗುತ್ತದೆ.ಅಚ್ಚಕನ್ನಡದಲ್ಲಿ ಕಬ್ಬಿಗನೆಂಬ ಹೆಸರಿದೆ. ಕವಿಯ ಶಕ್ತಿ, ಸಾಮರ್ಥ್ಯದ ಬಗ್ಗೆ "ರವಿ ಕಾಣದ್ದನ್ನು ಕವಿ ಕಂಡ" ಎಂಬ ಮಾತಿದೆ. ಅಂದರೆ ಕವಿಯಾದವನು ಬರೀ ವಾಸ್ತವ ಮಾತ್ರವಲ್ಲದೆ, ಕಲ್ಪನೆ (Imagination)ಯ ನಮೂನೆಯಲ್ಲಿ ಮೂಡಿಬಂದದ್ದನ್ನು ಚಮತ್ಕಾರಿಕವಾಗಿ ಹಾಗೂ ರಮಣೀಯವಾಗಿ ರಚಿಸುತ್ತಾನೆ ಮತ್ತು ಕಣ್ಣಿಗೆ ಕಟ್ಟಿದಂತೆ ಚಿತ್ರಿಸುತ್ತಾನೆ ಎಂದರ್ಥವಾಗುತ್ತದೆ.

"https://kn.wikipedia.org/w/index.php?title=ಕವಿ&oldid=1150565" ಇಂದ ಪಡೆಯಲ್ಪಟ್ಟಿದೆ