ತೇಗುವಿಕೆ
ಗೋಚರ
ತೇಗುವಿಕೆ ಎಂದರೆ ಬಾಯಿಯ ಮೂಲಕ ಜಠರಗರುಳು ವ್ಯೂಹದ (ಅನ್ನನಾಳ ಹಾಗೂ ಜಠರ) ಮೇಲ್ಭಾಗದಲ್ಲಿರುವ ವಾಯು ಬಿಡುಗಡೆಯಾಗುವುದು. ಇದು ಸಾಮಾನ್ಯವಾಗಿ ಕೇಳಿಸುತ್ತದೆ ಆದರೆ ಯಾವಾಗಲೂ ಅಲ್ಲ.
ಕಾರಣಗಳು
[ಬದಲಾಯಿಸಿ]- ತಿನ್ನುವಾಗ ಅಥವಾ ಕುಡಿಯುವಾಗ ಗಾಳಿಯನ್ನು ಕುಡಿಯುವುದರಿಂದ ಮತ್ತು ನಂತರ ಅದನ್ನು ಹೊರಹಾಕುವುದರಿಂದ ಸಾಮಾನ್ಯವಾಗಿ ತೇಗು ಬರುತ್ತದೆ. ಈ ಸಂದರ್ಭದಲ್ಲಿ ಹೊರಹಾಕಿದ ವಾಯುವು ಮುಖ್ಯವಾಗಿ ಸಾರಜನಕ ಹಾಗೂ ಆಮ್ಲಜನಕದ ಮಿಶ್ರಣವಾಗಿರುತ್ತದೆ.
- ಬಿಯರ್ ಹಾಗೂ ಅಮಾದಕ ಪಾನೀಯಗಳಂತಹ ಇಂಗಾಲದ ಡೈಆಕ್ಸೈಡ್ ಇರುವ ಪೇಯಗಳನ್ನು ಕುಡಿಯುವುದರಿಂದ ತೇಗು ಬರಬಹುದು. ಈ ಸಂದರ್ಭದಲ್ಲಿ ಹೊರಹಾಕಿದ ವಾಯುವು ಮುಖ್ಯವಾಗಿ ಇಂಗಾಲದ ಡೈಆಕ್ಸೈಡ್ ಆಗಿರುತ್ತದೆ.
- ಮೆಟ್‍ಫ಼ಾರ್ಮಿನ್ ಹಾಗೂ ಎಕ್ಸೆನಟೈಡ್‍ನಂತಹ ಡಾಯಬೀಟೀಸ್ ಔಷಧಿಗಳು ತೇಗನ್ನು ಉಂಟುಮಾಡಬಹುದು, ವಿಶೇಷವಾಗಿ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡಾಗ. ಹಲವುವೇಳೆ ಇದು ಕೆಲವು ವಾರಗಳಲ್ಲಿ ಬಗೆಹರಿಯುತ್ತದೆ.