ದಕ್ಷ
ಹಿಂದೂ ದಂತಕಥೆಯ ಪ್ರಕಾರ, ವಾಯವ್ಯದಲ್ಲಿ ವಾಸಿಸುವ ದಕ್ಷನು ಬ್ರಹ್ಮನ ಪುತ್ರರಲ್ಲಿ ಒಬ್ಬನು. ಬ್ರಹ್ಮನು ಹತ್ತು ಮಾನಸ ಪುತ್ರರನ್ನು ಸೃಷ್ಟಿಸಿದ ನಂತರ, ದಕ್ಷ, ಧರ್ಮ, ಕಾಮದೇವ ಮತ್ತು ಅಗ್ನಿಯರನ್ನು ಅನುಕ್ರಮವಾಗಿ ಬಲ ಹೆಬ್ಬೆರಳು, ಎದೆ, ಹೃದಯ ಮತ್ತು ಹುಬ್ಬುಗಳಿಂದ ಸೃಷ್ಟಿಸಿದನು.[೧] ತನ್ನ ಉದಾತ್ತ ಜನ್ಮದ ಜೊತೆಗೆ, ದಕ್ಷನು ಮಹಾನ್ ರಾಜನಾಗಿದ್ದನು. ಚಿತ್ರಗಳು ಅವನನ್ನು ಸ್ಥೂಲವಾದ ದೇಹ, ಚಾಚಿಕೊಂಡಿರುವ ಹೊಟ್ಟೆ, ಹಾಗೂ ಮಾಂಸಲವಾಗಿರುವ ಜೊತೆಗೆ ಕಾಡು ಮೇಕೆಯಂತಹ ಪ್ರಾಣಿಯ ಹಾಗೆ ಸುರುಳಿ ಕೊಂಬುಗಳನ್ನು ಹೊಂದಿರುವ ದುಂಡುದುಂಡಾಗಿರುವ ಮತ್ತು ದಪ್ಪ ಮನುಷ್ಯನನ್ನಾಗಿ ತೋರಿಸುತ್ತವೆ.
ಪುರಾಣಗಳ ಪ್ರಕಾರ, ದಕ್ಷನು ತನ್ನ ಪತ್ನಿ ಪ್ರಸೂತಿಯಿಂದ ೮೯ ಪುತ್ರಿಯರು ಮತ್ತು ತನ್ನ ಪತ್ನಿ ಪಂಚಜನಿಯಿಂದ ಮತ್ತೆ ೧೧೬ ಪುತ್ರಿಯರನ್ನು ಹೊಂದಿದ್ದನು. ಇವರಲ್ಲಿ ಸತಿಯು ಶಿವನನ್ನು, ರತಿ ಕಾಮದೇವನನ್ನು ಮದುವೆಯಾದಳು.
ದಕ್ಷ ಯಜ್ಞವು ಹಿಂದೂ ಧರ್ಮದಲ್ಲಿ ಶಾಕ್ತ ಪಂಥ ಮತ್ತು ಶೈವ ಪಂಥದಂತಹ ಪಂಥಗಳ ಸೃಷ್ಟಿ ಮತ್ತು ಅಭಿವೃದ್ಧಿಯಲ್ಲಿ ಒಂದು ಪ್ರಮುಖ ತಿರುವಾಗಿತ್ತು. ಇದು ಶಕ್ತಿಪೀಠಗಳ 'ಸ್ಥಳ ಪುರಾಣ'ದ ಹಿಂದಿನ ಕಥೆಯಾಗಿದೆ. ದಕ್ಷಿಣ ಏಷ್ಯಾದಾದ್ಯಂತ ೫೧ ಶಕ್ತಿಪೀಠಗಳಿವೆ (ಕೆಲವರು ೧೦೮ ಎಂದು ಹೇಳುತ್ತಾರೆ). ಈ ಕಥೆಯು ದೇವತೆ ಪಾರ್ವತಿಯನ್ನು ಸತಿಯ ಜಾಗದಲ್ಲಿ ದೇವಿಯಾಗಿ ಮಾಡಿತು ಮತ್ತು ಗಣೇಶ ಹಾಗೂ ಕಾರ್ತಿಕೇಯರ ಕಥೆಗೆ ಕಾರಣವಾಯಿತು.
ದಕ್ಷನು ಒಂದು ಬೃಹತ್ ಯಜ್ಞವನ್ನು ಆಯೋಜಿಸಿದನು ಮತ್ತು ಉದ್ದೇಶಪೂರ್ವಕವಾಗಿ ಶಿವ ಮತ್ತು ಸತಿಯರನ್ನು ಕರೆಯಲಿಲ್ಲ. ತಮ್ಮನ್ನು ಆಮಂತ್ರಿಸದ ಕಾರಣ ಶಿವನು ಸತಿಗೆ ಯಜ್ಞಕ್ಕೆ ಹೋಗಬಾರದೆಂದು ಹೇಳಿ ವಿರೋಧಿಸಿದನು. ಹೆತ್ತವರ ಬಂಧವು ಸತಿಯನ್ನು ಸಾಮಾಜಿಕ ಶಿಷ್ಟಾಚಾರ ಮತ್ತು ತನ್ನ ಪತಿಯ ಆಶಯಗಳನ್ನು ನಿರ್ಲಕ್ಷಿಸುವಂತೆ ಮಾಡಿತು. ಸತಿಯು ಕಾರ್ಯಕ್ರಮಕ್ಕೆ ಒಬ್ಬಳೇ ಹೋದಳು. ದಕ್ಷನು ಅವಳ ಮುಖಭಂಗ ಮಾಡಿ ಅತಿಥಿಗಳ ಮುಂದೆ ಅವಮಾನಿಸಿದನು. ಮತ್ತಷ್ಟು ಅವಮಾನವನ್ನು ತಾಳಲಾರದೇ ಸತಿಯು ಯಜ್ಞದ ಅಗ್ನಿಯ ಕಡೆ ಓಡಿ ತನ್ನನ್ನು ಬಲಿ ಕೊಟ್ಟುಕೊಂಡಳು. ಭಯಾನಕ ಘಟನೆಯ ಬಗ್ಗೆ ತಿಳಿದ ಶಿವನು, ಕ್ರೋಧದಲ್ಲಿ ಸ್ವಲ್ಪ ಕೂದಲನ್ನು ಕಿತ್ತು ನೆಲದ ಮೇಲೆ ಅದನ್ನು ಬಡಿದು ವೀರಭದ್ರ ಹಾಗೂ ಭದ್ರಕಾಳಿಯರನ್ನು ಆವಾಹಿಸಿದನು. ವೀರಭದ್ರ ಮತ್ತು ಭೂತಗಣಗಳು ದಕ್ಷಿಣಕ್ಕೆ ನಡೆದು ಎಲ್ಲ ಆವರಣವನ್ನು ನಾಶಮಾಡಿದರು. ದಕ್ಷನ ತಲೆಯನ್ನು ಕಡಿಯಲಾಯಿತು ಮತ್ತು ಕ್ರೋಧಾವೇಶದಲ್ಲಿ ಯಜ್ಞಶಾಲೆಯು ನಾಶವಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ The Matsya Puranam P-I (B.D. Basu) English Translation Ch #3, Page 10