(Translated by https://www.hiragana.jp/)
ವಿಕಿಪೀಡಿಯ:ಉಲ್ಲೇಖನ - ವಿಕಿಪೀಡಿಯ ವಿಷಯಕ್ಕೆ ಹೋಗು

ವಿಕಿಪೀಡಿಯ:ಉಲ್ಲೇಖನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಪುಟವು ಲೇಖನ ಶೈಲಿಯ ಕೈಪಿಡಿಯ ಭಾಗವಾಗಿದ್ದು,ಇದನ್ನು ವಿಕಿಪೀಡಿಯ ನಿಯಮಾವಳಿ ಎಂದು ಪರಿಗಣಿಸಲಾಗಿದೆ.ವಿಕಿಪೀಡಿಯಾದ ಹಲವಾರು ಲೇಖಕರ ಸಹಮತಿಯಿಂದ ಇದನ್ನು ನಿರೂಪಿಸಲಾಗಿದೆ.ವಿಕಿಪೀಡಿಯಾದ ಲೇಖನಗಳು ಈ ನಿಯಮಾವಳಿಗಳನ್ನು ಪಾಲಿಸುವುದು ಅತ್ಯಾವಶ್ಯಕ. ಈ ನಿಯಮಾವಳಿಗಳಿಗೆ ನೀವು ಅಗತ್ಯವೆನಿಸಿವ ಬದಲಾವಣೆಗಳನ್ನು ಮಾಡಬಹುದು, ಆದರೆ ಮಹತ್ವದ ಬಲಲಾವಣೆಗಳನ್ನು ಮಾಡುವ ಮುನ್ನ ಚರ್ಚೆ ಪುಟದಲ್ಲಿ ಚರ್ಚಿಸಿ.

ಈ ಲೇಖನವನ್ನು wikipedia:Citing Sources ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ವಿಕಿಪೀಡಿಯ ನೀತಿಗಳು
ಲೇಖನಗಳ ಗುಣಮಟ್ಟ
ತಟಸ್ಥ ದೃಷ್ಟಿಕೋನ
ಪರಿಶೀಲನಾರ್ಹತೆ
ಸ್ವಂತ ಸಂಶೋಧನೆ ಸಲ್ಲದು
ಮೂಲಗಳ ಉಲ್ಲೇಖ
ವಿಕಿಪೀಡಿಯ ಏನಲ್ಲ
ಜೀವಂತವಾಗಿರುವರ ಆತ್ಮಚರಿತ್ರೆಗಳು
ಇತರರೊಡನೆ ಸಹಯೋಗ
ಸದುದ್ದೇಶವಿದೆಯೆಂದು ನಂಬಿ
ನಾಗರೀಕತೆ ಹಾಗು ಶಿಷ್ಟಾಚಾರ
ವೈಯುಕ್ತಿಕ ದಾಳಿ ಸಲ್ಲದು
ಬಿಕ್ಕಟ್ಟು ನಿವಾರಣೆ

ಈ ಪುಟವು ವಿಕಿಪೀಡಿಯಾದ ಲೇಖನ ಶೈಲಿಯ ಬಗೆಗಿನ ಒಂದು ಲೇಖನ. ಉಲ್ಲೇಖಗಳನ್ನು ಒದಗಿಸುವ ಬಗೆಗಿನ ಮಾಹಿತಿಯನ್ನು ನೀಡುವುದು ಇದರ ಉದ್ದೇಶ. ವಿಕಿಪೀಡಿಯಾದ ಎರಡು ಪ್ರಮುಖ ನೀತಿಗಳಾದ ವಿಕಿಪೀಡಿಯ:ಸ್ವಂತ ಸಂಶೋಧನೆ ಸಲ್ಲದು ಹಾಗು ವಿಕಿಪೀಡಿಯ:ಪರಿಶೀಲಿಸಬಲ್ಲ ಮಾಹಿತಿ ಮಾತ್ರ ಗಳನ್ವಯ ಲೇಖನಗಳಲ್ಲಿ ನೀಡಿದ ಮಾಹಿತಿಗೆ ಉಲ್ಲೇಖಗಳನ್ನು ಒದಗಿಸುವುದು ಅತ್ಯಾವಶ್ಯಕ. ಉಲ್ಲೇಖನಗಳನ್ನು ನೀಡದ ಮಾಹಿತಿಯನ್ನು ತೆಗೆಯುವ ಹಕ್ಕು ಎಲ್ಲಾ ಲೇಖಕರಿಗೂ ಇರುತ್ತದೆ. ನಂಬಿಕೆಗರ್ಹ ಮೂಲಗಳ ಬಗೆಗಿನ ಮಾಹಿತಿಗಾಗಿ ವಿಕಿಪೀಡಿಯ:ನಂಬಿಕಸ್ಥ ಮೂಲಗಳು ಲೇಖನವನ್ನು ನೋಡಿರಿ. ವ್ಯಕ್ತಿಗಳ ಬಗೆಗಿನ ಲೇಖನಗಳಲ್ಲಿ ಸರಿಯಾದ ಮೂಲಗಳನ್ನು ಬಳಸುವ ಮಹತ್ವವನ್ನು ತಿಳಿಯಲು ವಿಕಿಪೀಡಿಯ:ಜೀವಂತವಾಗಿರುವರ ಆತ್ಮಚರಿತ್ರೆಗಳು ಲೇಖನವನ್ನು ನೋಡಿರಿ.

ಮೂಲ ಲೇಖನಗಳಿಂದ ಸಾಲುಗಳನ್ನು ನೇರವಾಗಿ ಉಲ್ಲೇಖಿಸುವಾಗ, ಚರ್ಚಾಸ್ಪದ ಅಥವಾ ವಿವಾದಗ್ರಸ್ತ ವಿಷಯಗಳ ಬಗೆಗಿನ ಲೇಖನಗಳು,ಲೇಖನದಲ್ಲಿ ಪ್ರಸ್ತಾಪಿಸಲಾದ ಯಾವುದೋ ಒಂದು ವಸ್ತು ಇತರ ವಸ್ತುಗಳಿಗಿಂತ ಉತ್ತಮ ಹಾಗೂ ಅದಕ್ಕೆ ಸಮಾನವಿಲ್ಲ ಎಂಬಿತ್ಯಾದಿ ಮಾಹಿತಿಗಳನ್ನು ಸೇರಿಸುವಾಗ ಉಲ್ಲೇಖಗಳ ಮಹತ್ವ ಇನ್ನಷ್ಟು ಹೆಚ್ಚುತ್ತದೆ. ನಿಮಗೆ ಉಲ್ಲೇಖಗಳನ್ನು ಹೇಗೆ ಫಾರ್ಮಾಟ್ ಮಾಡಬೇಕೆಂದು ತಿಳಿಯದಿದ್ದಲ್ಲಿ, ಲೇಖನದಲ್ಲಿ ಸೇರಿಸಿದರಾಯಿತು. ಇತರ ಲೇಖಕರು ಅದನ್ನು ನಿಮಗಾಗಿ ಸರಿಪಡಿಸುವರು.

ಏಕೆ ಮೂಲಗಳನ್ನು ಉಲ್ಲೇಖಿಸಬೇಕು

[ಬದಲಾಯಿಸಿ]
  • ಜೀವಂತ ವ್ಯಕ್ತಿಗಳ ಕುರಿತಾದ ವಿಷಯವು ನಂಬಲರ್ಹ ಮೂಲಗಳಿಂದ ಬಂದಿದೆ ಮತ್ತು ವಿಕಿಪೀಡಿಯ:ಜೀವಂತವ್ಯಕ್ತಿಗಳ ಚರಿತ್ರೆಗೆ ಅನುಗುಣವಾಗಿದೆ ಎಂದು ಖಾತರಿಪಡಿಸಲು .
  • ನಿಮ್ಮ ಬರಹವು ಮೂಲ ಸಂಶೋಧನೆ ಅಲ್ಲ ಎಂದು ತೋರಿಸಲು.
  • ಲೇಖನಗಳಲ್ಲಿನ ವಿಷಯವು ವಿಶ್ವಾಸಾರ್ಹವೆಂದೂ ಯಾರೇ ಓದುಗ ಅಥವಾ ಸಂಪಾದಕರು ಖಚಿತಪಡಿಸಬಹುದು ಎಂದೂ ಖಾತರಿಪಡಿಸಲು.
  • ಲೇಖನದ ವಿಷಯದ ಸಂಬಂಧ ಹೆಚ್ಚಿನ ವಿಶ್ವಾಸಾರ್ಹ ಮಾಹಿತಿಯನ್ನು ಹುಡುಕಲು ಬಳಕೆದಾರರು ಸಹಾಯಮಾಡಲು .
  • ವಿಕಿಪೀಡಿಯದ ಒಟ್ಟು ವಿಶ್ವಾಸಾರ್ಹತೆಯನ್ನು ಮತ್ತು ಅಧಿಕೃತತೆಯ ಗುಣವನ್ನು ಸುಧಾರಿಸಲು.
  • ಸಂಪಾದಕೀಯ ವಿವಾದಗಳ ಸಂಭಾವ್ಯತೆಯನ್ನು ಕಡಿಮೆ ಮಾಡಲು ಅಥವಾ ಏಳಬಹುದಾದ ವಿವಾದಗಳನ್ನು ಬಗೆಹರಿಸಲು .
  • ಉಪಯುಕ್ತ ಮಾಹಿತಿ ನೀಡುವ ಮೂಲಗಳಿಗೆ ಮನ್ನಣೆ ನೀಡಲು ಮತ್ತು ಕೃತಿಚೌರ್ಯದ ಆಪಾದನೆಗಳಿಂದ ತಪ್ಪಿಸಿಕೊಳ್ಳಲು .

ಗಮನಿಸಿ: ವಿಕಿಪೀಡಿಯ ಲೇಖನಗಳನ್ನು ಮೂಲ ಎಂದು ಉಲ್ಲೇಖಿಸಬಾರದು.


ಯಾವಾಗ ಮೂಲಗಳನ್ನು ಉಲ್ಲೇಖಿಸಬೇಕು ?

[ಬದಲಾಯಿಸಿ]

ನೀವು ವಿಷಯ ಸೇರಿಸಿದಾಗ

[ಬದಲಾಯಿಸಿ]

ಮೂಲಗಳನ್ನು ಹುಡುಕುವ ಬಗ್ಗೆ ಮಾಹಿತಿಗಾಗಿ, ವಿಕಿಪೀಡಿಯ:ನಂಬಲರ್ಹ ಮೂಲಗಳು ಲೇಖನ ನೋಡಿ.

  • ಲೇಖನವೊಂದಕ್ಕೆ ನೀವು ಮಾಹಿತಿಯನ್ನು ಸೇರಿಸುತ್ತಿದ್ದಲ್ಲಿ ವಿಶೇಷತಃ ಅದು ವಿವಾದಾಸ್ಪದವಾಗಿದ್ದಲ್ಲಿ ಅಥವಾ ಪ್ರಶ್ನಿಸಪಡುವಂತಿದ್ದಲ್ಲಿ ನೀವು ಮೂಲವನ್ನೊದಗಿಸಬೇಕು. ಉಲ್ಲೇಖದ ಸ್ವರೂಪ ಹೇಗಿರಬೇಕೆಂದು ನಿಮಗೆ ಗೊತ್ತಿರದಿದ್ದಲ್ಲಿ, ನಿಮಗಾಗಿ ಅದನ್ನು ಇತರರು ಮಾಡುವರು. ನಿಮಗೆ ಸಾಧ್ಯವಿದ್ದ ಮಾಹಿತಿ ಕೊಡಿ ಅಷ್ಟೇ .
  • ಸಾಮಾನ್ಯವಾಗಿ, ನಿಮ್ಮ ನೆನಪನ್ನಾಧರಿಸಿ ಲೇಖನಗಳನ್ನು ಬರೆಯುವಾಗ, ಜೊತೆ ಜೊತೆಯಲ್ಲಿಯೇ ಉಲ್ಲೇಖಾರ್ಹ ಮೂಲಗಳ ಶೊಧನೆ ಆರಂಭಿಸಿ. ವಿಷಯದ ಬಗ್ಗೆ ನಿಮಗೆ ಸಾಕಷ್ಟು ತಿಳುವಳಿಕೆ ಇದ್ದಲ್ಲಿ, ಅದರ ಬಗ್ಗೆ ಒಳ್ಳೆಯ ಮೂಲಗಳನ್ನು ತಿಳಿಸಿದರಾಯಿತು. ಇದರಿಂದ ಇತರ ಓದುಗರು ಹಾಗು ಸಂಪಾದಕರಿಗೆ ಆ ವಿಷಯದಲ್ಲಿ ಹೆಚ್ಚು ಮಾಹಿತಿ ತಿಳಿಯಲು ಸಹಾಯಕಾರಿಯಾಗುತ್ತದೆ.
  • ನೀವು ಬರೆಯುತ್ತಿರುವ ಲೇಖನದ ಬಗ್ಗೆ ನಿಮಗೆ ನಿಮ್ಮದೇ ಆದ ವೈಯುಕ್ತಿಕ ಅಭಿಪ್ರಾಯಗಳಿದ್ದರೆ, ಮೂಲಗಳ ಉಲ್ಲೇಖನದ ಮಹತ್ವ ಇನ್ನಷ್ಟು ಹೆಚ್ಚುತ್ತದೆ. "ಕೆಲವರು ಹೀಗೆನ್ನುತ್ತಾರೆ" ಎಂಬಿತ್ಯಾದಿ [[ವಿಕಿಪೀಡಿಯ::Avoid weasel words | Avoid weasel words]] ಪದಗಳ ಪ್ರಯೋಗ ನಿಲ್ಲಿಸಿ. ಆದಷ್ಟು ಮಟ್ಟಿಗೆ, ನಿಮ್ಮ ಲೇಖನವು ಪರಿಶೀಲಿಸಬಲ್ಲ ಮಾಹಿತಿ ಮಾತ್ರ ಹೊಂದಿರಲಿ. ವಿಷಯದ ಬಗ್ಗೆ ನೀವು ಹೊಂದಿರು ಮಾಹಿತಿಯನ್ನೇ ಹೊಂದಿರುವ ವ್ಯಕ್ತಿ ಅಥವಾ ಗುಂಪನ್ನು ಹುಡುಕಿ, ಅವರನ್ನು ಉಲ್ಲೇಖಿಸಿ, ಅವರ ಅಭಿಪ್ರಾಯಗಳು ಮೂಡಿರುವ ಪತ್ರಿಕೆ ಅಥವಾ ಇನ್ಯಾವುದೇ ನಂಬಲರ್ಹ ಮೂಲವನ್ನು ನೀಡಿರಿ. ನೆನಪಿರಲಿ, ವಿಕಿಪೀಡಿಯ ನಿಮ್ಮ ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವೇದಿಕೆಯಲ್ಲ ( ವಿಕಿಪೀಡಿಯ:ಸ್ವಂತ ಸಂಶೋಧನೆ ಸಲ್ಲದು ).