(Translated by https://www.hiragana.jp/)
ಹ್ಯಾರಿ ಪಾಟರ್ ಮತ್ತು ಅಝ್ಕಾಬಾನಿನ ಸೆರೆಯಾಳು - ವಿಕಿಪೀಡಿಯ ವಿಷಯಕ್ಕೆ ಹೋಗು

ಹ್ಯಾರಿ ಪಾಟರ್ ಮತ್ತು ಅಝ್ಕಾಬಾನಿನ ಸೆರೆಯಾಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹ್ಯಾರಿ ಪಾಟರ್ ಪುಸ್ತಕಗಳು
Harry Potter and the Prisoner of Azkaban
ಲೇಖಕಿಜೆ. ಕೆ. ರೊಲಿಂಗ್
ಚಿತ್ರಲೇಖಕCliff Wright (UK)
Mary GrandPré (US)
ಪ್ರಕಾರಕಲ್ಪನೆ
ಪ್ರಕಾಶಕರುಬ್ಲೂಮ್ಸ್ ಬೆರಿ (ಯುಕೆ)
ಆರ್ಥರ್ ಎ. ಲೆವಿನ್/
ಸ್ಕೊಲ್ಯಸ್ಟಿಕ್ (ಯುಎಸ್)
ರೈನ್‌ಕೋಸ್ಟ್ (ಕೆನಡ)
ಬಿಡುಗಡೆ೮ July ೧೯೯೯ (UK)
೮ September ೧೯೯೯ (US)
ಪುಸ್ತಕ ಸಂಖ್ಯೆThree
ಮಾರಾಟ~೧೮೦ million (Worldwide)[ಸೂಕ್ತ ಉಲ್ಲೇಖನ ಬೇಕು]
ಕಥಾ ಕಾಲಕ್ರಮಾಂಕ೩೧ July ೧೯೯೩- ೧೨ June ೧೯೯೪
ಅಧ್ಯಾಯಗಳು೨೨
ಪುಟಗಳು೩೧೭ (UK)
೪೩೫ (US)
ಐಎಸ್‌ಬಿಎನ್೦೭೪೭೫೪೨೧೫೫
ಹಿಂದಿನ ಪುಸ್ತಕHarry Potter and the Chamber of Secrets
ಮುಂದಿನ ಪುಸ್ತಕHarry Potter and the Goblet of Fire

ಹ್ಯಾರಿ ಪಾಟರ್ ಮತ್ತು ಅಝ್ಕಾಬಾನ್ ನ ಸೆರೆಯಾಳು ಜೆ.ಕೆ. ರೌಲಿಂಗ್ ಬರೆದ ಹ್ಯಾರಿ ಪಾಟರ್ ಮತ್ತು ಅಝ್ಕಾಬಾನ್ ನ ಸೆರೆಯಾಳು ಜೆ.ಕೆ. ರೌಲಿಂಗ್ ಬರೆದ ಹರ್ಮಿಯೋನೆ ಸರಣಿಯ ಮೂರನೆಯ ಕಾದಂಬರಿ. ೮ ಜುಲೈ ೧೯೯೯ರಂದು ಈ ಪುಸ್ತಕವು ಪ್ರಕಟಣೆಗೊಂಡಿತು.

ಈ ಕಾದಂಬರಿಯು೧೯೯೯ರ ವಿಟ್ ಬ್ರೆಡ್ ಪುಸ್ತಕ ಪ್ರಶಸ್ತಿ, ಬ್ರ್ಯಾಂ ಸ್ಟೋಕರ್ ಪ್ರಶಸ್ತಿ, ೨೦೦೦ದ ಶ್ರೇಷ್ಠ ಕಾಲ್ಪನಿಕ ಕೃತಿಗೆ ನೀಡುವ ಲೋಟಸ್ ಪ್ರಶಸ್ತಿ,[] ಗಳನ್ನು ಗೆದ್ದಿತು ಮತ್ತು ಇತರ ಪ್ರಶಸ್ತಿಗಳಿಗಾಗಿಯೂ ಸೂಚಿತವಾಗಿದ್ದು, ಅವುಗಳ ಪೈಕಿ ಹ್ಯೂಗೋ ಪ್ರಶಸ್ತಿಯೂ ಒಂದಾಗಿದ್ದಿತು.[] ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಗೌರವಕ್ಕೆ ಪಾತ್ರವಾದ ಕಾಲ್ಪನಿಕ ಕೃತಿಗಳ ಪೈಕಿ ಈ ಕೃತಿಯೂ ಸ್ಥಾನಪಡೆದಿದೆ.[] ಈ ಕಾಎಂಬರಿಯಾಧಾರಿತ ಚಲನಚಿತ್ರವೊಂದು ೩೧ ಮೇ ೨೦೦೪ರಂದುಯುನೈಟೆಡ್ ಕಿಂಗ್ಡಂನಲ್ಲಿ ಮತ್ತು ೪ ಜೂನ್ ೨೦೦೪ರಂದು ಯುಎಸ್ ಮತ್ತು ಇತರ ಹಲವಾರು ದೇಶಗಳಲ್ಲಿ ಬಿಡುಗಡೆಯಾಯಿತು. ಈ ಕಾದಂಬರಿಗಳ ಸರಣಿಯಲ್ಲಿ ಲಾರ್ಡ್ ವೋಲ್ಡ್ ಮಾರ್ಟ್ ಯಾವ ರೂಪದಲ್ಲೂ ಕಾಣಿಸಿಕೊಳ್ಳದ ಕಾದಂಬರಿಯೆಂದರೆ ಇದೊಂದೇ

ಕಥಾವಸ್ತು

[ಬದಲಾಯಿಸಿ]
  • ಹ್ಯಾರಿ ಮತ್ತು ಅವನ ಸ್ನೇಹಿತರಾದ ರಾನ್ ವೀಸ್ಲಿ ಮತ್ತು ಹರ್ಮಿಯೋನೆ ಗ್ರ್ಯಾಂಗರ್r ಹಾಗ್ವಾರ್ಟ್ಸ್ ಸ್ಕೂಲ್ ಆಫ್ ವಿಚ್ ಕ್ರಾಫ್ಟ್ ಅಂಡ್ ವಿಝರ್ಡ್ರೀಗೆ ಮರಳಿದಾಗ ಸಿರಿಯಸ್ ಬ್ಲ್ಯಾಕ್ ಪರಾರಿಯಾಗಿರುವುದರ ಕಾರಣ ಭದ್ರತಾವ್ಯವಸ್ಥೆಗಳು ಬಿಗಿಗೊಳಿಸಲ್ಪಟ್ಟಿರುವುದನ್ನು ಕಾಣುತ್ತಾರೆ. ಈಗ ಕ್ಷೇತ್ರಗಳನ್ನು ಡಿಮೆಂಟರ್ಸ್, ಎಂಬ ಕಪ್ಪನೆಯ, ಕ್ರೂರವಾಗಿ ಕಾಣುವ ಪ್ರಾಣಿಗಳಂತಹವರು ಕಾವಲು ಕಾಯುತ್ತಿದ್ದರು;
  • ಅವರು ಹತ್ತಿರ ಸುಳಿದ ಯಾವುದೇ ವ್ಯಕ್ತಿಯ ಸಂತೋಷವನ್ನು ಹೀರಿಬಿಡುವ ಶಕ್ತಿಯುಳ್ಳವರಾಗಿದ್ದರು ಹಾಗೂ ಈ ಜೀವಿಗಳು ಅಝ್ಕಾಬಾನ್ ಸೆರೆಮನೆಯ ಕಾವಲುಭಟರಾಗಿದ್ದರು. ಈ ಜೀವಿಗಳು ಹ್ಯಾರಿ ತನ್ನ ಮಾತಾಪಿತೃಗಳ ದನಿಯನ್ನು ಕೇಳುವಂತೆ ಮಾಡಿದರು. ಪ್ರೊಫೆಸರ್ ರೀಮಸ್ ಲ್ಯುಪಿನ್, ಶಾಲೆಯ ನೂತನ ಕರಾಳ ಕಲೆಗಳ ವಿರುದ್ಧ ಭದ್ರತೆ ಕಲಿಸುವ ಶಿಕ್ಷಕರಾಗಿ ಸೇರಿದ್ದು, ಅವರು ಹ್ಯಾರಿ ಈ ಮೊದಲೇ ತನ್ನ ಜೀವನದಲ್ಲಿ ಕರಾಳತೆಗಳನ್ನು ಕಂಡಿರುವುದರಿಂದ ಡಿಮೆಂಟರ್ಸ್ ಹಿಡಿತಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚೆಂದು ಹೇಳುತ್ತಾರೆ.
  • ಡಿಮೆಂಟರ್ಸ್ ನಿಂದ ರಕ್ಷಿಸುವಂತಹ ಪ್ಯಾಟ್ರೊನಸ್ ಚಾರ್ಮ್ ಎಂಬರಕ್ಷಾವಿಧಿಯನ್ನು ಹ್ಯಾರಿಗೆ ಹೇಳಿಕೊಡಲು ಅವರು ಒಪ್ಪುತ್ತಾರೆ. ಸ್ಥಳೀಯ ಹಳ್ಳಿಯಾದ ಹಾಗ್ಸ್ ಮೀಡ್ ಗೆ, ತನ್ನ ಚಿಕ್ಕಪ್ಪನಾದ ವೆರ್ಮನ್ ಹ್ಯಾರಿಯ ಅರ್ಜಿಗೆ ಸಹಿ ಹಾಕದ ಕಾರಣ, ತಾನು ಹೋಗಲು ಅನುಮತಿಸಲಾಗು ವುದಿಲ್ಲವೆಂದು ಅರಿತ ಹ್ಯಾರಿ ಬಹಳ ಬೇಸರದಿಂದ ಕುಗ್ಗುತ್ತಾನೆ. ಯಕ್ಷಿಣೀ ಪ್ರಾಣಿಗಳ ಪಾಲನೆಪೋಷಣೆಯ ಶಿಕ್ಷಕರಾಗಿ ಮೊದಲ ತರಗತಿಯನ್ನು ತೆಗೆದುಕೊಳ್ಳಲು ಬಂದ ಹ್ಯಾಗ್ರಿಡ್ ರ ಇಡೀ ಪೀರಿಯಡ್ ಅನ್ನು ಡ್ರಾಕೋ ಮಾಲ್ ಫಾಯ್ ಹಾಳು ಮಾಡಿದುದಕ್ಕಾಗಿ ಕೋಪಗೊಂಡಿದ್ದಾನೆ. *ಮಾಲ್ ಫಾಯ್ ಹ್ಯಾಗ್ರಿಡ್ ರ ಪ್ರೀತಿಯ ಹಿಪ್ಪೋಗ್ರಿಫ್ (ಒಂದು ಯಕ್ಷಿಣಿ ಪ್ರಾಣಿ) ಬಕ್ ಬೀಕ್ ನಿಂದ ಬೇಕೆಂದೇ ಆಕ್ರಮಣಕ್ಕೊಳಗಾಗುತ್ತಾನೆ ಮತ್ತು ಅವನ ತಂದೆಯು ಬಕ್ ಬೀಕ್ ಆ ವರ್ಷದಲ್ಲಿ ಕೊಲ್ಲಲ್ಪಡಬೇಕೆಂದು ತೀರ್ಪು ಹೊರಡಿಸುತ್ತಾರೆ. ಹರ್ಮಿಯೋನೆ ಕಾಲ-ಭ್ರಾಮಕವನ್ನು ಬಳಸಿ ಕಾಲದಲ್ಲಿ ಯಾನ ಮಾಡುತ್ತಾ ಒಂದೇ ಸಮಯದಲ್ಲಿ ನಡೆಯುವ ತರಗತಿಗಳಲ್ಲಿ ಹಾಜರಾಗಲು ಸಮರ್ಥಳಾಗುತ್ತಾಳೆ. ಬ್ಲ್ಯಾಕ್ ಕೋಟೆಯಿಂದ ಎರಡು ಬಾರಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನಾದರೂ ಹ್ಯಾರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ.
  • ಫ್ರೆಡ್ ಮತ್ತು ಜಾರ್ಜ್ ವೀಸ್ಲಿ ಹಾಗ್ಸ್ ಮೀಡ್ ಗೆ ಹೋಗಲು ಒಂದು ಗುಪ್ತ ಮಾರ್ಗವೊಂದನ್ನು ತೋರಿಸುತ್ತಾರೆ ಹಾಗೂ ಅವನಿಗೆ ಮಾರಾಡರ್ ನ ನಕ್ಷೆಯನ್ನು ಕೊಟ್ಟರು. ರಾನ್ ತನ್ನ ಇಲಿ ಸ್ಕ್ಯಾಬರ್ಸ್, ಕಾಣೆಯಾಗಿರುವುದನ್ನು ಕಂಡು, ಅದನ್ನು ಹರ್ಮಿಯೋನೆಯ ಬೆಕ್ಕಾದ ಕ್ರೂಕ್ ಶ್ಯಾಂಕ್ಸ್ ತಿಂದುಬಿಟ್ಟಿತೆಂದು ನಂಬುತ್ತಾನೆ; ತತ್ಪರಿಣಾಮವಾಗಿ ಅವನು ಮತ್ತು ಹರ್ಮಿಯೋನೆಯ ಮಧ್ಯ ವೈಮನಸ್ಯ ಉಂಟಾಗುತ್ತದೆ.
  • ಹರ್ಮಿಯೋನೆ ನಂತರ ಬಕ್ ಬೀಕ್ ನ ವಧೆಗೆ ಮುನ್ನ ಮೂವರೂ ಹ್ಯಾಗ್ರಿಡ್ ರನ್ನು ಭೇಟಿ ಮಾಡಲು ಹೋದಾಗ ಸ್ಕ್ಯಾಬರ್ಸ್ ಅನ್ನು ಹ್ಯಾಗ್ರಿಡ್ ರ ಗುಡಿಸಿಲಲ್ಲಿ ಕಾಣುತ್ತಾಳೆ ಗುಡಿಸಿಲಿನಿಂದ ಮರಳಿ ಬರುತ್ತಿರುವಾಗ, ದಾರಿಯಲ್ಲಿ ದೊಡ್ಡ ಕಪ್ಪು ನಾಯಿಯೊಂದು ರಾನ್ ನ ಮೇಲೆ ಧಾಳಿ ಮಾಡಿ ಅವನನ್ನು ಹೂಪಿಂಗ್ ವಿಲ್ಲೋ ಎಂಬ ಮಾಯದ ಮರದ ಕೆಳಗಿದ್ದ ಸುರಂಗವೊಂದಕ್ಕೆ ಎಳೆದೊಯ್ಯುತ್ತದೆ. ಹ್ಯಾರಿ ಮತ್ತು ಹರ್ಮಿಯೋನೆ ಸಹ ಆ ಸುರಂಗವನ್ನು ಹೊಕ್ಕುವ ಮುನ್ನ ಹೂಪಿಂಗ್ ವಿಲ್ಲೋದಿಂದ ಕ್ರೂರವಾಗಿ ಥಳಿಸಲ್ಪಡುತ್ತಾರೆ.
  • ಹ್ಯಾರಿ ಮತ್ತು ಹರ್ಮಿಯೋನೆ ರಾನ್ ನ ಕೂಗು ಬರುವ ಸದ್ದಿನಲ್ಲೇ ಸಾಗಿ, ಒಂದು ಪುರಾತನ ತಟ್ಟಿಗೆಗಳಿಂದ ಕೂಡಿದ ಶ್ರೀಕಿಂಗ್ ಶ್ಯಾಕ್ (ಕಿರುಚುವ ಗುಡಿಸಲು)ಎಂಬ ಕಚ್ಚಾ ಗುಡಿಸಿಲನ್ನು ಸೇರುತ್ತಾರೆ. ಅಲ್ಲಿ ಅವರಿಗೆ ಸಿರಿಯಸ್ ಬ್ಲ್ಯಾಕ್ ಒನ್ನ ಅನಿಮಾಗಸ್ (ಮಾನವ-ಪ್ರಾಣಿ) ಎಂದು ತಿಳಿದು ಬರುತ್ತದೆ. ಹ್ಯಾರಿ ಬ್ಲ್ಯಾಕ್ ರ ಮೇರೆ ಆಕ್ರಮಣ ಮಾಡಲು ಯತ್ನಿಸುವಾಗ ಲ್ಯುಪಿನ್ ರ ಪ್ರವೇಶವಾಗುತ್ತದೆ.
  • ಹರ್ಮಿಯೋನೆ ತಾನು ಲ್ಯುಪಿನ್ ರೊಡನೆ ತರಗತಿಯಲ್ಲಿದ್ದಾಗ ಲ್ಯುಪಿನ್ ನಡೆದುಕೊಂಡ ರೀತಿಗಳನ್ನು ಗಮನಿಸಿದುದಾಗಿ ಹೇಳುತ್ತಾ, ತತ್ಸಂಬಂಧಿತವಾಗಿ ಅವರನ್ನು ಪ್ರಶ್ನಿಸುತ್ತಾಳೆ. ಪ್ರೊಫೆಸರ್ ಸ್ನೇಪ್ ರ ಪ್ರಬಂಧಗಳಲ್ಲಿ ಒಂದನ್ನು ಮುಗಿಸಿದ ನಂತರ, ಆ ಪ್ರಬಂಧದಲ್ಲಿ ಉಲ್ಲೇಖಿಸಿದ ಗುಣವಿಶೇಷಗಳನ್ನು ಲ್ಯುಪಿನ್ ರಲ್ಲಿ ಕಂಡುದರಿಂದ, ತನಗೆ ಪ್ರೊಫೆಸರ್ ಲ್ಯುಪಿನ್ ತೋಳ-ಮಾನವರೆಂದು ತಿಳಿದುಬಂದಿದೆ ಎಂದು ಹರ್ಮಿಯೋನೆ ಹೇಳುತ್ತಾಳೆ. ಲ್ಯುಪಿನ್ ತಾನು ತೋಳ-ಮಾನವನೆಂದು ಒಪ್ಪಿಕೊಳ್ಳುತ್ತಾರೆ.
  • ಲ್ಯುಪಿನ್ ತಾವು, ಬ್ಲ್ಯಾಕ್, ಪೆಟ್ಟಿಗ್ರೂ ಮತ್ತು ಹ್ಯಾರಿಯ ತಂದೆಯಾದ ಜೇಮ್ಸ್ ಪಾಟರ್ ಬಹಳ ಆತ್ಮೀಯ ಸ್ನೇಹಿತರಾಗಿದ್ದರೆಂದೂ, ಎಲ್ಲಾ ಸೇರಿಯೇ ಮಾರಾಡರ್ ನ ನಕ್ಷೆಯನ್ನು ಬರೆದುದೆಂದೂ ವಿವರಿಸುತ್ತಾರೆ. ಲ್ಯುಪಿನ್ ರ ರೂಪಾಂತರ ಹೆಚ್ಚು ಹಿತಕರವಾಗಲೆಂಬ ದೃಷ್ಟಿಯಿಂದ ಅವರ ಎಲ್ಲಾ ಸ್ನೇಹತರೂ ಪ್ರಾಣಿ-ಮಾನವರಾಗುತ್ತಾರೆ - ಇವರು ಬೇಕೆನಿಸಿದಾಗ ಮನುಷ್ಯನ ರೂಪದಿಂದ ಪ್ರಾಣಿಯ ರೂಪಕ್ಕೆ ರೂಪಾಂತರ ಹೊಂದಲು ಸಮರ್ಥರಾಗಿರುತ್ತಾರೆ.
  • ಮಾರಾಡರ್ ಗಳು ದೊಡ್ಡವರಾದ ನಂತರವೂ ಸ್ನೇಹಿತರಾಗಿಯೇ ಉಳಿದಿರುತ್ತಾರೆ ಮತ್ತು ವೋಲ್ಡ್ ಮಾರ್ಟ್ ಪಾಟರ್ ಕುಟುಂಬದ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆಂದು ತಿಳಿದಾಗ, ಬ್ಲ್ಯಾಕ್ ಅವರ ರಹಸ್ಯ-ಕಾಪಾಡುವವರಾಗುತ್ತಾರೆ. ಆದರೆ, ದೀಹದ ಪ್ರಾಣಿಯಾಗಿ ಸೇವೆ ಸಲ್ಲಿಸುವ ಸಲುವಾಗಿ ಬ್ಲ್ಯಾಕ್ ತನ್ನ ಕರ್ತವ್ಯವನ್ನು ಗುಪ್ತವಾಗಿ ಪೆಟ್ಟಿಗ್ರೂರೊಡನೆ ಅದಲುಬದಲು ಮಾಡಿಕೊಂಡುದಾಗಿ ಹೇಳುತ್ತಾರೆ.
  • ಬ್ಲ್ಯಾಕ್ ಪೆಟ್ಟಿಗ್ರೂ ವಿಶ್ವಾಸದ್ರೋಹಿಯೆಂದು ಹೇಳುತ್ತಾರೆ ಹಾಗೂ ಅವರು ಬ್ಲ್ಯಾಕ್ ನಿಂದ ಕೊಲ್ಲಲ್ಪಡದೆ, ವಾಸ್ತವವಾಗಿ ಸ್ಕ್ಯಾಬರ್ಸ್ ಆಗಿ ಜೀವಿಸುತ್ತಿದ್ದಾರೆಂಬ ರಹಸ್ಯವನ್ನು ಬಯಲು ಮಾಡುತ್ತಾರೆ. ಪ್ರೊಫೆಸರ್ ಸ್ನೇಪ್ ಹಠಾತ್ತನೆ ಒಳನುಗ್ಗುತ್ತಾರೆ ಮತ್ತು ತಮ್ಮ ಮಂತ್ರದಂಡವನ್ನಾಡಿಸುತ್ತಾ ಲ್ಯುಪಿನ್ ಮತ್ತು ಬ್ಲ್ಯಾಕ್ ರನ್ನು ಡಿಮೆಂಟರ್ಸ್ ಗೆ ಹಿಡಿದುಕೊಟ್ಟುಬಿಡುವುದಾಗಿ ಬೆದರಿಕೆ ಹಾಕತೊಡಗುತ್ತಾರೆ.
  • ಆದರೆ ಹ್ಯಾರಿ, ಹರ್ಮಿಯೋನೆ, ಮತ್ತು ರಾನ್ ಎಲ್ಲರೂ ಸೇರಿ ಅದೇ ಮಂತ್ರದಿಂದ ಪ್ರೊಫೆಸರ್ ಸ್ನೇಪ್ ರ ಮೇಲೆ ಧಾಳಿ ಮಾಡುತ್ತಾರೆ, ಸ್ನೇಪ್ ಮೂರ್ಛೆತಪ್ಪಿ ಕೆಳಗುರುಳುತ್ತಾರೆ. ಈ ಸಂದರ್ಭವನ್ನು ಬಳಸಿಕೊಂಡ ಲ್ಯುಪಿನ್ ಮತ್ತು ಬ್ಲ್ಯಾಕ್ ಸ್ಕ್ಯಾಬರ್ಸ್ ಅನ್ನು ರಾನ್ ನಿಂದ ಪಡೆದು ಆ ಇಲಿಯನ್ನು ಮತ್ತೆ ಪೆಟ್ಟಿಗ್ರೂ ಆಗಿ ರೂಪಾಂತರಗೊಳಿಸುತ್ತಾರೆ. ಪೆಟ್ಟಿಗ್ರೂ ಈ ಕಥೆ ನಿಜವೆಂದು ಒಪ್ಪಿಕೊಳ್ಳುತ್ತಾರೆ.
  • ಆದರೆ ಲ್ಯುಪಿನ್ ಮತ್ತು ಬ್ಲ್ಯಾಕ್ ಲ್ಯುಪಿನ್ ರನ್ನು ಕೊಂದು ತಾವು ಕೊಲೆಗಾರರಾಗುವುದು ಬೇಡವೆಂದು ಹ್ಯಾರಿ ಅವರಿಬ್ಬರನ್ನೂ ತಡೆಯುತ್ತಾನೆ. ಅದರ ಬದಲಿಗೆ, ಸಿರಿಯಸ್ ರ ಮೇಲಿದ್ದ ಆಪಾದನೆಯನ್ನು ಹೋಗಲಾಡಿಸುವ ಸಲುವಾರಿ ಪೆಟ್ಟಿಗ್ರೂರನ್ನು ಹಾಗ್ ವಾರ್ಟ್ಸ್ ಗೆ ಮತ್ತೆ ಕರೆದುಕೊಂಡುಹೋಗಲು ಅವರಿಬ್ಬರ ಮನವೊಲಿಸುತ್ತಾನೆ. ಆದರೆ ಅವರು ಕೋಟೆಗೆ ಮರಳುತ್ತಿದ್ದಂತೆಯೇ ಹುಣ್ಣಿಮೆಯ ಚಂದ್ರ ಮೂಡುತ್ತಾನೆ ಮತ್ತು ಲ್ಯುಪಿನ್ ತೋಳಮಾನವರಾಗಿ ರೂಪಾಂತರಗೊಳ್ಳುತ್ತಾರೆ.
  • ಲ್ಯುಪಿನ್ ತನ್ನ ತೋಳದ ರೂಪದಲ್ಲಿ ಹತೋಟಿ ಕಳೆದುಕೊಳ್ಳುತ್ತಾರೆ ಮತ್ತು ಪೆಟ್ಟಿಗ್ರೂ ಮತ್ತೆ ಇಲಿಯಾಗುತ್ತಾರೆ ಹಾಗೂ ತಪ್ಪಿಸಿಕೊಂಡು ಹೋಗಿಬಿಡುತ್ತಾರೆ ಬ್ಲ್ಯಾಕ್ ಲ್ಯುಪಿನ್ ರಿಂದ ತಳ್ಳಿ ಬೀಳಿಸಲ್ಪಡುತ್ತಾರೆ, ಲ್ಯುಪಿನ್ ಹ್ಯಾರಿಯನ್ನು ಕೊಲ್ಲಲು ಮುಂದೆ ಬರುತ್ತಿದ್ದಂತೆ ಒಂದು ವಿಚಿತ್ರವಾದ ಕೂಗು ಅವರನ್ನು ಎಚ್ಚರಿಸಿ ಹ್ಯಾರಿಯಿಂದ ದೂರಕ್ಕೆ ಸೆಳೆಯುತ್ತದೆ. ಹ್ಯಾರಿ ಪ್ರಜ್ಞೆತಪ್ಪಿದ ಸಿರಿಯಸ್ ಒಂದು ಕೆರೆಯ ಪಕ್ಕದಲ್ಲಿ ಬಿದ್ದಿರುವುದನ್ನು ಕಾಣುತ್ತಾರೆ.
  • ಆ ಕ್ಷಣದಲ್ಲೇ ಡಿಮೆಂಟರ್ ಗಳು ಅವರ ಮೇಲೆ ಆಕ್ರಮಣ ಮಾಡಿ ಇಬ್ಬರನ್ನೂ ಕೊಂದೇ ಬಿಡುವ ಮಟ್ಟಕ್ಕೆ ಬರುತ್ತಾರೆ. ಕಡೆಯ ಕ್ಷಣದಲ್ಲಿ ಒಂದು ಪ್ಯಾಟ್ರೋನಸ್ ಮಂತ್ರವನ್ನು ಬಳಸಿದ ಅಪರಿಚಿತ ರೂಪವೊಂದು ಅವರನ್ನು ಉಳಿಸುತ್ತದೆ; ಆ ಮಂತ್ರದ ತಾಯಿತವನ್ನು ತನ್ನ ತಂದೆಯೇ ಹಾಕಿದುದೆಂದು ಹ್ಯಾರಿ ನಂಬಿರುತ್ತಾನೆ. ನಂತರ ಹ್ಯಾರಿ ಮೂರ್ಛೆತಪ್ಪಿ ಬೀಳುತ್ತಾನೆ.
  • ಹ್ಯಾರಿ ಕೋಟೆಯಲ್ಲಿ ಮೂರ್ಛೆಯಿಂದ ಹೊರಬಂದಾಗ ಬ್ಲ್ಯಾಕ್ ರನ್ನು ಸೆರೆಹಿಡಿಯಲಾಗಿದೆ ಎಂಬುದನ್ನು ತಿಳಿದುಕೊಳ್ಳುತ್ತಾನೆ. ಅವರನ್ನು ಉಳಿಸಲು, ಹ್ಯಾರಿ ಮತ್ತು ಹರ್ಮಿಯೋನೆ ಕಾಲ-ಭ್ರಾಮಕವನ್ನು ಬಳಸಿ ಕಾಲಘಟ್ಟದಲ್ಲಿ ಹಿಂದಕ್ಕೆ ಸಾಗಿ ಅವರು ಸೆರೆಯಾಗುವುದನ್ನು ತಪ್ಪಿಸುತ್ತಾರೆ. ಹ್ಯಾರಿ ಮತ್ತು ಹರ್ಮಿಯೋನೆ ಬಕ್ ಬೀಕ್ ರನ್ನು ಕಾಪಾಡುತ್ತಾರೆ ಮತ್ತು ರಾತ್ರಿ ನಡೆದ ಘಟನೆಗಳನ್ನು ಮತ್ತೆ ವೀಕ್ಷಿಸುತ್ತಾರೆ - ಡಿಮೆಂಟರ್ ಗಳು ಹ್ಯಾರಿ ಮತ್ತು ಸಿರಿಯಸ್ ರನ್ನು ಸುತ್ತುವರಿದ ಘಟನೆಯ ವರೆಗೆ ಅವರು ಅದನ್ನು ವೀಕ್ಷಿಸುತ್ತಾರೆ.
  • ಪ್ಯಾಟ್ರೋನಸ್ ಚಾರ್ಮ್ ಅನ್ನು ಯಾರು ಕಳುಹಿಸಿದುದು ಎಂದು ನೋಡಲು ಹ್ಯಾರಿ ದೃಢಚಿತ್ತನಾಗಿರುತ್ತಾನೆ, ಕಡೆಗೆ ಅದನ್ನು ಕಳುಹಿಸಿದುದು ತಾನೇ ಎಂದು ಅರಿಯುತ್ತಾನೆ. ಸಿರಿಯಸ್ ರನ್ನು ರಕ್ಷಿಸಲಾಗುತ್ತದೆ ಮತ್ತು ಬಕ್ ಬೀಕ್ ಅನ್ನೇರಿ ಅವರು ಪರಾರಿಯಾಗುತ್ತಾರೆ. ಲ್ಯುಪಿನ್, ತೋಳಮಾನವನೆಂದು ತಿಳಿದುಬಂನಂತರ ಉಚ್ಛಾಟಿಸಲ್ಪಟ್ಟು, ರಾಜಿನಾಮೆ ನೀಡುತ್ತಾರೆ.
  • ತಾನು ಕಂಡ ಕರಾಳ ಕಲೆಗಳ ವಿರುದ್ಧ ಭದ್ರತೆಯ ಶಿಕ್ಷಣ ನೀಡುವ ಶಿಕ್ಷಕರಲ್ಲಿ ಲ್ಯುಪಿನ್ ರೇ ಶ್ರೇಷ್ಠರು ಎಂದು ಹ್ಯಾರಿ ಹೇಳುತ್ತಾನೆ. ವೋಲ್ಡ್ ಮಾರ್ಟ್ ಮರಳಿ ಬರಲು ಪೆಟ್ಟಿಗ್ರೂ ಸಹಾಯ ಮಾಡಬಹುದೆಂದು ಹ್ಯಾರಿ ಚಿಂತಿತನಾಗಿರುತ್ತಾನೆ, ಆದರೆ ಪೆಟ್ಟಿಗ್ರೂವಿನ ಜೀವ ಉಳಿಸಿದುದಕ್ಕಾಗಿ ಹ್ಯಾರಿಗೆ ಕೃತಜ್ಞನಾಗಿರಬೇಕೆಂದು ಡಂಬಲ್ ಡೋರ್ ಹೇಳುತ್ತಾರೆ.

ಬಿಡುಗಡೆಗೆ ಮುಂಚಿನ ಚರಿತ್ರೆ

[ಬದಲಾಯಿಸಿ]
  • ಈ ಸರಣಿಯಲ್ಲಿ ಬರೆದ ಮೂರು ಪುಸ್ತಕಗಳಲ್ಲಿ , ಪ್ರಿಸನರ್ ಆಫ್ ಅಝ್ಕಾಬಾನ್ ಬರೆಯಲು ಬಹಳ ಬೇರೆಲ್ಲಾ ಪುಸ್ತಕಗಳಿಗಿಂತಲೂ ಕಡಿಮೆ ಸಮಯ ಹಿಡಿಯಿತು - ಹ್ಯಾರಿ ಪಾಟರ್ ಅಂಡ್ ದ ಫಿಲಾಸಫರ್ಸ್ ಸ್ಟೋನ್ ಬರೆಯಲು ಐದು ವರ್ಷಗಳ ಕಾಲ ಬೇಕಾಯಿತು ಮತ್ತು ಹ್ಯಾರಿ ಪಾಟರ್ ಅಂಡ್ ದ ಛೇಂಬರ್ ಆಫ್ ಸೀಕ್ರೆಟ್ಸ್ ಮುಗಿಸಲು ಎರಡು ವರ್ಷಗಳು ಬೇಕಾದವು, ಆದರೆ ಹ್ಯಾರಿ ಪಾಟರ್ ಅಂಡ್ ದ ಪ್ರಿಸನರ್ ಆಫ್ ಅಝ್ಕಾಬಾನ್ ಬರೆಯಲು ಕೇವಲ ಒಂದು ವರ್ಷ ಹಿಡಿಯಿತು.[]
  • ಈ ಪುಸ್ತಕದಲ್ಲಿ ರೀಮಸ್ ಲ್ಯುಪಿನ್ ರ ಪಾತ್ರವನ್ನು ಪರಿಚಯಿಸಿದುದು ರೌಲಿಂಗ್ ರಿಗೆ ಅಚ್ಚುಮೆಚ್ಚಿನ ಅಂಶವಾಗಿತ್ತು. .[] ಪ್ರಿಸನರ್ ಆಫ್ ಅಝ್ಕಾಬಾನ್ ಬರೆದುದು "ನಾನು ಸರ್ವಕಾಲಿಕವಾಗಿ ಹೊಂದಿದ ಅತ್ಯುತ್ತಮ ಬರವಣಿಗೆಯ ಅನುಭವ...ಈ ಮೂರನೆಯ ಪುಸ್ತಕವನ್ನು ಬಹಳ ಅನುಕೂಲಕರವಾದ ಸ್ಥಳದಲ್ಲಿ ಕುಳಿತು ಬರೆದೆ. ತಕ್ಷಣದ ಆರ್ಥಿಕ ಚಿಂತೆಗಳು ಇರಲಿಲ್ಲ ಮತ್ತು ಪತ್ರಿಕೆಗಳ ನಿರೀಕ್ಷೆಗಳು ಮತ್ತು ಪತ್ರಿಕೆಗಳಿಗೆ ನನ್ನ ಮೇಲೆ ಗಮನ ಅಷ್ಟೇನೂ ಇರಲಿಲ್ಲ." ಎಂದರು ರೌಲಿಂಗ್[]

ವಿಮರ್ಶಾತ್ಮಕ ಸ್ವೀಕಾರ

[ಬದಲಾಯಿಸಿ]
  • ಗ್ರೆಗರಿ ಮಗೈರ್ {1ದ ನ್ಯೂಯಾರ್ಕ್ ಟೈಮ್ಸ್{/1} ನಲ್ಲಿ {2ಪ್ರಿಸನರ್ ಆಫ್ ಅಝ್ಕಾಬಾನ್n{/2} ಬಗ್ಗೆ ಒಂದು ವಿಮರ್ಶೆಯನ್ನು ಬರೆದರು. ಅದರಲ್ಲಿ ಅವರು "ಇಂದಿನವರೆಗೆ, ಕಥಾವಸ್ತುವಿನ ವಿಷಯದಲ್ಲಿ, ಈ ಪುಸ್ತಕಗಳು ಯಾವುದೇ ಹೊಸತನವನ್ನು ನೀಡಿಲ್ಲ, ಆದರೆ ಕಥಾ ವಸ್ತುವು ಅಮೋಘವಾಗಿದೆ. ಇಲ್ಲಿಯವರೆಗೆ, ಇಷ್ಟು ಒಳಿತು." ಎಂದು ಬರೆದರು.[]
  • ಕಿಡ್ಸ್ ರೀಡ್ಸ್.com ಗಾಗಿ ಬರೆದ ಒಬ್ಬ ವಿಮರ್ಶಕರು , "ಈ ಕ್ಷಿಪ್ರಗತಿಯಲ್ಲಿ ಸಾಗುವ ಕಾಲ್ಪನಿಕ ಕಥೆಯು ಜೆ.ಕೆ. ರೌಲಿಂಗ್ ಬರೆಯಲಿರುವ ಮತ್ತೂ ನಾಲ್ಕು ಪುಸ್ತಕಗಳನ್ನು ಓದುವ ಹಸಿವನ್ನು ಹೆಚ್ಚಿಸುತ್ತದೆ. ಹ್ಯಾರಿಯ ಮೂರನೆಯ ವರ್ಷ ಆಕರ್ಷಕವಾಗಿದೆ. ಅದನ್ನು ಓದುವುದನ್ನು ತಪ್ಪಿಸಿಕೊಳ್ಳಬೇಡಿ" ಎಂದು ಬರೆದರು.[]
  • ಕಿರ್ಕಸ್ ರಿವ್ಯೂಸ್ ತಾರಾಂಶಭರಿತ ವಿಮರ್ಶೆಗಳನ್ನೇನೂ ಕೊಡಲಿಲ್ಲವಾದರೂ, "ಒಂದು ಸೂಕ್ತವಾದ ನಾಡಿಬಡಿತ ತೀವ್ರಗೊಳಿಸುವ ಅಂತ್ಯ...ಈ ಪುಸ್ತಕದಲ್ಲಿನ ಮುಖ್ಯ ಪಾತ್ರಗಳು ಮತ್ತು ನಿರಂತರವಾಗಿ ಸಾಗುವ ಕಥೆಗಳೆರಡೂ ಬಹಳ ಸೊಗಸಾಗಿ ಮೂಡಿಬಂದಿವೆ...ಪುಟಗಳ ಸಂಖ್ಯಗಿಂತಲೂ ಚಿಕ್ಕದಾಗಿ ಕಾಣುವ ಈ ಪುಸ್ತಕವು ಓದುಗನು ಹ್ಯಾರಿಯ ಅಭಿಮಾನಿಯಾದರೆ ಇರುವ ಕೆಲಸವನ್ನೆಲ್ಲಾ ಬದಿಗೊತ್ತಿ ಪುಸ್ತಕ ಹಿಡಿಯಲು ಪ್ರಚೋದಿಸುತ್ತದೆ ಮತ್ತು ಅಭಿಮಾನಿಯಲ್ಲದಿದ್ದರೆ ಇದರ ಜಾಡಿನಿಂದ ಹೊರಹೋಗಲು ಪ್ರೇರಕವಾಗುತ್ತದೆ." ಎಂದು ವಿಮರ್ಶಿಸಿದರು.[]
  • ದ ಗಾರ್ಡಿಯನ್ ನ ಕ್ಲೇಯ್ರ್ ಆರ್ಮಿಟ್ ಸ್ಟೀಡ್ ರದು ಮಿಶ್ರ ಪ್ರತಿಕ್ರಿಯೆ; "ಆದರೆ, ರೌಲಿಂಗ್ ನಿಃಸಂದೇಹವಾಗಿ ಒಳ್ಳೆಯ ಕಥೆಗಾರ್ತಿಯಾದರೂ, ಅವರ ಪುಸ್ತಕಗಳು ಸಂಪ್ರದಾಯಬದ್ಧವಾಗಿ ಕಥೆ ಹೇಳುವಿಕೆಯು ಯಾವುದನ್ನು ಸಾದಿಸಬಹುದು ಎನ್ನುವುದರ ಬಗ್ಗೆ ಜಗ್ಗಿ ಹಿಡಿಯಲ್ಪಟ್ಟಿವೆ . ಒಂದು ಉತ್ಕೃಷ್ಟ ಬೋರ್ಡಿಂಗ್ ಶಾಲೆಯ ಕಾಲ್ಪನಿಕ ಕಥೆ. ಈ ಕೃತಿಗಳು ಬಿಂಬಿಸುವ ಮಕ್ಕಳಂತೆಯೇ, ಹ್ಯಾರಿ ಪಾಟರ್ ಪುಸ್ತಕಗಳು ಬೆಡಗು, ಠಕ್ಕುಗಳಿಂದ ಕೂಡಿದ್ದರೂ, ಮೂಲತಃ ಸುಮಾರ್ಗಬದ್ಧ." ಎಂದರು[]
  • ಆದರೆ, ಪ್ರಿಸನರ್ ಆಫ್ ಅಝ್ಕಾಬಾನ್ ವಿಟ್ ಬ್ರೆಡ್ ಪ್ರಶಸ್ತಿಯನ್ನು ಪಡೆಯುವುದನ್ನು ವಿರೋಧಿಸಿದ್ದ, ಆ ಪ್ರಶಸ್ತಿಪ್ರದಾನ ಸಮಿತಿಯ ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಆಂಥೋನಿ ಹೋಲ್ಡೆನ್, ಈ ಪುಸ್ತಕದ ಬಗ್ಗೆ ಬಹಳ ನಕಾರಾತ್ಮಕ ಅಭಿಪ್ರಾಯಗಳನ್ನು ಮಂಡಿಸುತ್ತಾ, ಈ ಪುಸ್ತಕವು "ಬೇಸರ ಹುಟ್ಟಿಸುವಂತಹುದು" ಮತ್ತು "ಅಡ್ಡಾದಿಡ್ಡಿಯಾಗಿ ಬರೆಯಲ್ಪಟ್ಟಿದೆ" ಎಂದರು. ಈ ಪುಸ್ತಕದಲ್ಲಿನ ಪಾತ್ರಗಳು "ಕಪ್ಪು-ಬಿಳುಪು" ಮಾದರಿಯವು ಮತ್ತು ಕಥಾನಕವು "ಊಹಿಸಲು ಸಾಧ್ಯವಾದುದು" ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.[]

ಆವೃತ್ತಿಗಳು

[ಬದಲಾಯಿಸಿ]
  • ಹ್ಯಾರಿ ಪಾಟರ್ ಅಂಡ್ ದ ಪ್ರಿಸನರ್ ಆಫ್ ಅಝ್ಕಾಬಾನ್ ಹಾರ್ಡ್ ಕವರ್ ರಕ್ಷಾಪುಟದಲ್ಲಿ ಯುಕೆಯಲ್ಲಿ ೮ ಜುಲೈ ೧೯೯೯ರಂದು[೧೦] ಮತ್ತು ಯುಎಸ್ ನಲ್ಲಿ ಅದೇ ವರ್ಷದ ೮ ಸೆಪ್ಟೆಂಬರ್ ನಂದು ಬಿಡುಗಡೆಯಾಯಿತು.[೧೧] ಬ್ರಿಟಿಷ್ ಪೇಪರ್ ಬ್ಯಾಕ್ ಆವೃತ್ತಿಯು ೧ ಏಪ್ರಿಲ್ ೨೦೦೦ದಂದು ಬಿಡಯಗಡೆಯಾಯಿತು [೧೨] ಮತ್ತು ಯುಎಸ್ ಪೇಪರ್ ಬ್ಯಾಕ್ ಆವೃತ್ತಿಯು ೧ ಅಕ್ಟೋಬರ್ ೨೦೦೧ರಂದು ಬಿಡುಗಡೆಯಾಯಿತು.[೧೩]
  • ಬ್ಲೂಮ್ಸ್ ಬರಿ ಇದರೊಂದಿಗೆ ಒಂದು ವಯಸ್ಕರ ಆವೃತ್ತಿಯನ್ನು ಹೊಸ ರಕ್ಷಾಪುಟ ವಿನ್ಯಾಸದೊಂದಿಗೆ ಪೇಪರ್ ಬ್ಯಾಕ್ ನಲ್ಲಿ ೨೦೦೪ರ ಜುಲೈ ಹತ್ತರಂದು ಬಿಡುಗಡೆ ಮಾಡಿತು[೧೪] ಮತ್ತು ಒಂದು ಹಾರ್ಡ್ ಕವರ್ ಆವೃತ್ತಿಯನ್ನು ೨೦೦೪ರ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಿತು.[೧೫] ಹಸಿರು ಚೌಕಟ್ಟು ಮತ್ತು ಸಹಿಯನ್ನು ಹೊಂದಿದ್ದ ಹಾರ್ಡ್ ಕವರ್ ವಿಶೇಷ ಆವೃತ್ತಿಯೊಂದು ಜುಲೈ ೮, ೧೯೯೯ರಂದು ಬಿಡುಗಡೆಯಾಯಿತು .[೧೬]
  • ಮೇ ೨೦೦೪ರಲ್ಲಿ, ಬ್ಲೂಮ್ಸ್ ಬರಿ ಒಂದು ಸೆಲಿಬ್ರಿಟಿ ಆವೃತ್ತಿಯನ್ನು ಬಿಡುಗಡೆಗೊಳಿಸಿತು,[೧೭] ಮತ್ತು ನವೆಂಬರ್ ಒಂದು, ೨೦೧೦ರಂದು, ಅದೇ ಸಂಸ್ಥೆ ಒಂದು ಸಹಿ ಆವೃತ್ತಿಯನ್ನು ಹೊರತಂದಿತು.[೧೮]

ಚಲನಚಿತ್ರ ರೂಪಾಂತರಗಳು

[ಬದಲಾಯಿಸಿ]
  • ಹ್ಯಾರಿ ಪಾಟರ್ ಅಂಡ್ ದ ಪ್ರಿಸನರ್ ಆಫ್ ಅಝ್ಕಾಬಾನ್ ನ ಚಲನಚಿತ್ರದ ಅವತರಣಿಕೆಯು ೨೦೦೪ರಲ್ಲಿ ಬಿಡುಗಡೆಯಾಯಿತು; ಇದನ್ನು ಆಲ್ಫೋನ್ಸೋ ಕುವರಾನ್ ನಿರ್ದೇಶಿಸಿದರು, ಚಿತ್ರಕಥೆ ಬರೆದವರು ಸ್ಟೀವ್ ಕ್ಲೋವ್ಸ್.[೧೯] ಈ ಚಿತ್ರವು ಬಿಡುಗಡೆಯಾಗುತ್ತಲೇ ಗಲ್ಲಾಪೆಟ್ಟಿಗೆಯಲ್ಲಿ ಒಂದನೆಯ ಸ್ಥಾನ ಗಳಿಸಿ, ಎರಡು ವಾರಗಳ ಕಾಲ ಅದೇ ಸ್ಥಾನವನ್ನು ಕಾಪಾಡಿಕೊಂಡಿತ್ತು.[೨೦] ಈ ಚಿತ್ರವು ಜಗದಾದ್ಯಂತ $೭೯೫.೬ ಮಿಲಿಯನ್ ಸಂಪಾದಿಸಿ,[೨೧]
  • ೨೦೦೪ ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ಪಟ್ಟಿಯಲ್ಲಿ ಎರಡನೆಯ ಸ್ಥಾನ ಪಡೆದಿತು; ಮೊದಲನೆಯ ಸ್ಥಾನ ಪಡೆದ ಚಿತ್ರ ಶ್ರೀಕ್ ೨ . ಆದರೆ, ಹ್ಯಾರಿ ಪಾಟರ್ ಸರಣಿಯ ಎಲ್ಲಾ ಏಳು ಚಿತ್ರಗಳಿಗೂ ಹೋಲಿಸಿದರೆ, ಪ್ರಿಸನರ್ ಆಫ್ ಅಝ್ಕಾಬಾನ್ ಬಹಳ ಕಡಿಮೆ ಮೊತ್ತ ಗಳಿಸಿತು.[೨೨] ಎಂಪೈರ್ ಮ್ಯಾಗಝೀನ್ ನ '೨೦೦೮ರ ೫೦೦ ಸರ್ವಕಾಲಿಕ ಶ್ರೇಷ್ಠ ಚಿತ್ರಗಳು' ಪಟ್ಟಿಯಲ್ಲಿ ಈ ಚಿತ್ರವು ೪೭೧ನೆಯ ಸ್ಥಾನದಲ್ಲಿದೆ.[೨೩]

ಉಲ್ಲೇಖಗಳು‌

[ಬದಲಾಯಿಸಿ]
  1. ೧.೦ ೧.೧ [http:// www.worldswithoutend. com/books _year_index.asp?year=2000 "2000 Award Winners & Nominees"]. Worlds Without End. Retrieved 22 ಜುಲೈ 2009. {{cite web}}: Check |url= value (help)
  2. awardannals.com/ wiki/Honor_roll:Fantasy_books "Honor roll:Fantasy books". Award Annals. 15 ಆಗಸ್ಟ್ 2007. Retrieved 15 ಆಗಸ್ಟ್ 2007. {{cite web}}: Check |url= value (help)
  3. ೩.೦ ೩.೧ 1999: "Accio Quote!, the largest archive of J.K. Rowling interviews on the web". 8 ಸೆಪ್ಟೆಂಬರ್ 1999. Retrieved 7 ನವೆಂಬರ್ 2010. {{cite web}}: Check |url= value (help)
  4. Puig, Claudia (27 ಏಪ್ರಿಲ್ 2004). "New 'Potter' movie sneaks in spoilers from upcoming books". Retrieved 17 ಅಕ್ಟೋಬರ್ 2010.
  5. Maguire, Gregory (5 ಸೆಪ್ಟೆಂಬರ್ 1999). [http: //www. nytimes.com /1999 /09/05/books/lord-of-the-golden-snitch.html?ref=bookreviews&pagewanted=1 "Lord of the Golden Snitch"]. The New York Times. Retrieved 13 ಅಕ್ಟೋಬರ್ 2010. {{cite web}}: Check |url= value (help)
  6. Maughan, Shannon. "Kidsreads.com - Harry Potter - The Prisoner of Azkaban". Kidsreads.com. Archived from the original on 25 ಅಕ್ಟೋಬರ್ 2010. Retrieved ೭ November ೨೦೧೦. {{cite web}}: Check date values in: |accessdate= (help); More than one of |archivedate= and |archive-date= specified (help); More than one of |archiveurl= and |archive-url= specified (help)
  7. "Harry Potter and the Prisoner of Azkaban review". Kirkus Reviews. 15 ಸೆಪ್ಟೆಂಬರ್ 1999. Archived from the original on 28 ಮೇ 2011. Retrieved 17 ಜನವರಿ 2011. {{cite web}}: Italic or bold markup not allowed in: |publisher= (help); More than one of |archivedate= and |archive-date= specified (help); More than one of |archiveurl= and |archive-url= specified (help)
  8. Armitstead, Claire (8 ಜುಲೈ 1999). "Wizard, but with a touch of Tom Brown". The Guardian. Retrieved 3 ಮಾರ್ಚ್ 2011. {{cite web}}: Italic or bold markup not allowed in: |publisher= (help)
  9. Holden, Anthony (25 ಜೂನ್ 2000). "Why Harry Potter doesn't cast a spell over me". The Observer. Retrieved 10 ಫೆಬ್ರವರಿ 2011. {{cite web}}: Italic or bold markup not allowed in: |publisher= (help)
  10. 0747542155 /ref=sr_1_3?s=books&ie=UTF8&qid=1299200012&sr=1-3 "Harry Potter and the Prisoner of Azkaban (Book 3) (Hardcover)". Amazon.co.uk. Retrieved 3 Mach 2011. {{cite web}}: Check |url= value (help); Check date values in: |accessdate= (help)[ಶಾಶ್ವತವಾಗಿ ಮಡಿದ ಕೊಂಡಿ]
  11. "Harry Potter and the Prisoner of Azkaban (Book 3) (Hardcover)". Amazon.com. Retrieved 3 ಮಾರ್ಚ್ 2011.
  12. amazon. co.uk/Harry-Potter-Prisoner-Azkaban-Paperback/dp/0747546290/ref=sr_1_2?s=books&ie=UTF8&qid=1299201205&sr=1-2 "Harry Potter and the Prisoner of Azkaban (Book 3) paperback". Amazon .co.uk. Retrieved 3 ಮಾರ್ಚ್ 2011. {{cite web}}: Check |url= value (help)
  13. "Harry Potter and the Prisoner of Azkaban (Book 3) Paperback". BargainBookStores.com. Archived from the original on 7 ಜುಲೈ 2011. Retrieved 3 ಮಾರ್ಚ್ 2011. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  14. "Harry Potter and the Prisoner of Azkaban (Book 3): Adult Edition (Paper back)". Retrieved 3 March 2011.. {{cite web}}: Check date values in: |accessdate= (help); Unknown parameter |publishe r= ignored (help)
  15. "Harry Potter and the Prisoner of Azkaban: Adult Edition". Bloomsbury.com. Archived from the original on 29 ಜೂನ್ 2011. Retrieved 11 ಮಾರ್ಚ್ 2011. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help); Unknown parameter |accessdat= ignored (|access-date= suggested) (help)
  16. 0747545111 /ref = sr_1_6?s=books&ie=UTF8&qid=1299201410&sr=1-6 "Harry Potter and the Prisoner of Azkaban (Book 3): Special Edition". Amazon.co.uk. Retrieved 3 ಮಾರ್ಚ್ 2011. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  17. books/ details /9780747573 760 "Harry Potter and the Prisoner of Azkaban Celebratory edition". Bloomsbury. Retrieved 3 ಮಾರ್ಚ್ 2011. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  18. "Harry Potter and the Prisoner of Azkaban Signature edition". Amazon.co.uk. Retrieved 3 ಮಾರ್ಚ್ 2011.
  19. [http:// www. rottentomatoes.com/m/harry_potter_and_the_prisoner_of_azkaban/ "Harry Potter and the Prisoner of Azkaban (2004)"]. IGN Entertainment, Inc. 1998–2009. Retrieved 12 ಡಿಸೆಂಬರ್ 2009. {{cite web}}: Check |url= value (help)CS1 maint: date format (link)
  20. "Harry Potter and the Prisoner of Azkaban". IGN Entertainment, Inc. 1998–2009. Archived from [http: //www. rottentomatoes. com/m/harry_potter_and_the_prisoner_of_azkaban/numbers.php the original] on 15 ಜುಲೈ 2015. Retrieved 12 ಡಿಸೆಂಬರ್ 2009. {{cite web}}: Check |url= value (help)CS1 maint: date format (link)
  21. "Harry Potter and the Prisoner of Azkaban (2004)". Box Office Mojo. Archived from harrypotter3.htm the original on 2 ಮಾರ್ಚ್ 2011. Retrieved ೫ February ೨೦೦೯. {{cite web}}: Check |url= value (help); Check date values in: |accessdate= (help)
  22. "2004 WORLDWIDE GROSSES". Box Office Mojo. Retrieved ೨೪ September ೨೦೦೭. {{cite web}}: Check date values in: |accessdate= (help)
  23. "The 500 Greatest Movies of All Time". Empire. Retrieved 7 ನವೆಂಬರ್ 2010. {{cite web}}: Italic or bold markup not allowed in: |publisher= (help)

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]

ಇವನ್ನೂ ಗಮನಿಸಿ‌

[ಬದಲಾಯಿಸಿ]

ಟೆಂಪ್ಲೇಟು:Portal